ಮುಂಡಗೋಡ: ತಾಲೂಕಾ ಸರಕಾರಿ ಆಸ್ಪತ್ರೆಯ ಕಾರ್ಯಾಲಯದ ಪಕ್ಕದಲ್ಲಿದ್ದ 2 ಗಂಧದ ಮರಗಳನ್ನು ಮರಗಳ್ಳರು ಕಡಿದು ತುಂಡುಗಳನ್ನು ಮಾಡಿ ಟೊಂಗೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಶನಿವಾರ ಜರುಗಿದೆ.
ಆರೋಗ್ಯಾಧಿಕಾರಿ ಕಾರ್ಯಾಲಯದ ಪಕ್ಕದಲ್ಲಿ ಮತ್ತು ವಸತಿ ಗೃಹದಲ್ಲಿ ಎರಡು ಗಂಧದ ಮರ ಕಡೆದಿದ್ದಾರೆ. ಸುಮಾರು ಹನ್ನೆರಡರಿಂದ ಹದಿನೈದು ವರ್ಷದ ಮರಗಳಾಗಿದ್ದವು. ಇವುಗಳನ್ನು ಕಡಿದ ಸಾಗಿಸಿದ ವಿಷಯ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಜನ ವಸತಿಯಲ್ಲಿದ್ದ ಎರಡು ಮರಗಳನ್ನು ಮರಗಳ್ಳರು ಕಡಿದು ಟೊಂಗೆಗಳನ್ನು ಅಲ್ಲಿ ಬಿಟ್ಟಿದ್ದು ಜನತೆಯ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಸ್ಥಳಕ್ಕೆಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಾಗೀಶ., ಮುಂಡಗೋಡ ವಲಯ ಅರಣ್ಯಧಿಕಾರಿ: ತಾಲೂಕು ಆಸ್ಪತ್ರೆಯ ಆವರಣದಲ್ಲಿದ್ದ ಗಂಧದ ಮರಗಳನ್ನು ಕಡೆದಿರುವ ಬಗ್ಗೆ ಇಂದು ಬೆಳಿಗ್ಗೆ ಮಾಹಿತಿ ತಿಳಿಯಿತು.ತಕ್ಷಣವೇ ನಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಕಲೆಹಾಕಿದ್ದಾರೆ. ಹನ್ನೆರಡು ರಿಂದ ಹದಿನೈದು ವರ್ಷದ ಗಂಧದ ಮರವಾಗಿದ್ದವು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಅಕ್ಕ-ಪಕ್ಕದ ಸಿಸಿ ಕ್ಯಾಮೆರಾಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ.


ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು