Ticker

6/recent/ticker-posts

ಅಕ್ರಮವಾಗಿ ಶ್ರೀಗಂಧ ಕಡಿದು ಹಿತ್ತಲಿನಲ್ಲಿ ಬಚ್ಚಿಟ್ಟರೇ? ವಿಚಾರಣೆ ನಡೆಸುತ್ತಿರುವ ಅರಣ್ಯ ಸಿಬ್ಬಂದಿ

 ಮುಂಡಗೋಡ: ಪಟ್ಟಣದ ಹಳೂರ ಓಣೆಯ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಸುಮಾರು 1 ಲಕ್ಷ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರ ಕಡಿದು ಮನೆಯೊಂದರ ಆವರಣದಲ್ಲಿ ಶೇಖರಿಸಿಟ್ಟಿದ್ದ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿಗಳು ಶ್ರೀಗಂಧ ಕಟ್ಟಿಗೆ ವಶಪಡಿಸಿಕೊಂಡ ಘಟನೆ ಗುರುವಾರ ಸಂಜೆ ಜರುಗಿದೆ.


ಹಳೂರಿನ ನಿವಾಸಿಯೊಬ್ಬರ ಮನೆಯ ಹಿತ್ತಲಿನಲ್ಲಿ ಶ್ರೀಗಂಧದ ಮರಗಳ ತುಂಡುಗಳನ್ನು ಶೇಖರಿಸಿಡಲಾಗಿತ್ತು. ಹಳೂರಿನ ಪುರಾತನ ಆಂಜನೇಯ ದೇವಸ್ಥಾನಕ್ಕೆ ಸಂಬಂದಿಸಿದ ಗದ್ದೆಯಲ್ಲಿದ್ದ ಸುಮಾರು 15 ವರ್ಷದ ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಮನೆಯ ಹಿತ್ತಲಿನಲ್ಲಿ ಶೇಖರಿಸಿಡಲಾಗುತ್ತಿತ್ತು ಯಾರೋ ಸ್ಥಳಿಯರು ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ದಾವಿಸಿದ ಅರಣ್ಯ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಶ್ರೀಗಂಧದ ಮರದ  ಕಟ್ಟಿಗೆಯನ್ನು ವಶಕ್ಕೆ ಪಡೆದು ಮನೆಯ ಮಾಲೀಕನನ್ನು ವಿಚಾರಿಸಿದರು.  ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಮನೆಯ  ಜಾಗೆಯಲ್ಲಿ ಇಟ್ಟಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಪರಿಸರವಾದಿಗಳಿಂದ ಕೇಳಿಬರುತ್ತಿದೆ. 

ಪ್ರಕರಣ ಮುಚ್ಚಲು ಯತ್ನ?: ಮನೆಯ ಆವರಣದಲ್ಲಿ ಇಟ್ಟಿದ್ದ ಶ್ರೀಗಂಧ ಕಟ್ಟಿಗೆಯನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ತಮ್ಮ ಕಚೇರಿಗೆ ಮಾಲೀಕನನ್ನು ಕರೆದೊಯುತ್ತಿರಬೇಕಾದರೆ. ಹಲವು ಪ್ರಭಾವಿಗಳ ಪೋನ್ ಕರೆಗಳು ಇಲಾಖೆಯ ಸಿಬ್ಬಂದಿಗಳಿಗೆ ಬಂದಿತೆಂಬ ಗುಸು ಗುಸು ಕೇಳಿಬಂತು. ಅಲ್ಲದೇ ಪ್ರಕರಣ  ಇತ್ಯರ್ಥಗೊಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅರಣ್ಯ ಇಲಾಖೆಯವರು ಪ್ರಕರಣವನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಜನರು ಕುತೂಹಲದಿಂದ ನೋಡುತ್ತಿದ್ದಾರೆ.  ನಿಜವಾದ ಆರೋಪಿಗಳನ್ನು ಹಿಡಿಯುವರೇ? ಅಥವಾ ತನಿಖೆ ನಡೆಯುತ್ತಿದೆ. ಆರೋಪಿ ಸಿಕ್ಕಿಲ್ಲವೆಂದು ಪ್ರಕರಣಕ್ಕೆ ಎಳ್ಳು ನೀರು ಬೀಡುವರೆ ಕಾದು ನೋಡ ಬೇಕಾಗಿದೆ.