ಮುಂಡಗೋಡ: ಅನಧಿಕೃತವಾಗಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಸಾಗುವಾನಿ ತುಂಡುಗಳನ್ನು ಓಮಿನಿ ಕಾರಿನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ದಾಳಿ ಮಾಡಿ ಸಾಗುವಾನಿ ತುಂಡುಗಳು ಸಮೇತವಾಗಿ ವಾಹನ ವಶಕ್ಕೆ ಪಡೆದಿದ್ದಾರೆ. ಆರೋಪಿಯು ತಪ್ಪಿಸಿಕೊಂಡು ಪರಾರಿಯಾದ ಘಟನೆ ತಾಲೂಕಿನ ಪಾಳಾ ಗ್ರಾಮ ಪಂಚಾಯತ ವ್ಯಾಪ್ತಿಯ ಹುಡೆಲಕೊಪ್ಪ ಬಳಿ ಶನಿವಾರ ಜರುಗಿದೆ.
ಡಿಎಪ್ಒ ಎಸ್ ಜಿ ಹೆಗಡೆ ಹಾಗು ಎಸಿಎಪ್ ರವಿ ಹುಲಕೋಟಿ ರವರ ಮಾರ್ಗದರ್ಶನದಲ್ಲಿ ಆರ್.ಎಪ್.ಒ ಮಂಜುನಾಥ.ಎಚ್.ನಾಯ್ಕ ನೇತೃತ್ವದಲ್ಲಿ ಉಪ ವಲಯ ಅಣ್ಯಾಧಿಕಾರಿ ಚಂದ್ರಕಾಂತ ಮುಕ್ರಿ,ಅರಣ್ಯ ರಕ್ಷಕ ಮುತ್ತು ಹಳ್ಳಿ, ಸಿಬ್ಬಂದಿಗಳಾದ ನಾರಾಯಣ ಓಣಿಕೇರಿ, ಪ್ರಕಾಶ ಬಳ್ಳಾರಿ, ಜಗದೀಶ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು