ಮುಂಡಗೋಡ: ಮನೆ ಜಾಗೆಯ ಸಲುವಾಗಿ ಎರಡು ಕುಟುಂಬಗಳ ನಡುವೆ ಮಾರಾ ಮಾರಿ ನಡೆದು ಒಬ್ಬರಿಗೊಬ್ಬರು ಚಾಕುವಿನಿಂದ ಇರಿದುಕೊಂಡ ಘಟನೆ ಪಟ್ಟಣದ ಇಂದಿರಾನಗರದಲ್ಲಿ ರವಿವಾರ ರಾತ್ರಿ ಜರುಗಿದೆ.
ಹಸನಖಾನ್ ಕಾಶಿಮಸಾಬ್ ಪಠಾಣ ಎಂಬುವರು ಗಾಯಗೊಂಡು ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸಗೆ ಕಳುಹಿಸಲಾಗಿದೆ.. ಜಮಾತಿನ ಮುಖ್ಯಸ್ಥರು ಸಭೆ ಸೇರಿ ಜಾಗೆಗೆ ಸಂಬಂದಿಸದಂತೆ ಸಭೆ ಸೇರಿ ನಿರ್ಣಯ ಮಾಡಿದ್ದರು ಆದರು ಕೂಡ ಪದೇ ಪದೇ ಜಗಳ ಮಾಡುತ್ತಿದ್ದನ್ನು ತಿಳಿದ ಜಮಾತಿನ ಮುಖ್ಯಸ್ಥರು ಸಭೆ ಸೇರಿ ನಿರ್ಣಯ ಮಾಡಲು ಸೇರಿ ಎರಡು ಕುಟುಂಬದವರನ್ನು ಕರೆದಿದ್ದಾರೆ. ಯಾವುದಕ್ಕೂ ಬಗ್ಗದ ಪಠಾಣ ಹಾಗೂ ಟಪಾಲ ಎಂಬ ಎರಡು ಕುಟುಂಬದವರು ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ ಯಾರು ಯಾವಾಗ ಏಕೆ ಚಾಕುವಿನಿಂದ ಹಲ್ಲೆ ಮಾಡಿದರು ಯಾಕೆ ಎಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಘಟನಾ ಸ್ಥಳಕ್ಕೆ ಹಾಗೂ ತಾಲೂಕಾಸ್ಪತ್ರೆಗೆ ಸಿಪಿಐ ಬಿ.ಎಸ್ ಲೋಕಾಪೂರ ಹಾಗೂ ಪಿಎಸ್ಐ ಯಲ್ಲಾಲಿಂಗ ಕುನ್ನೂರ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು ಪರಶೀಲನೆ ನಡೆಸುತ್ತಿದ್ದು ಪ್ರಕರಣಕ್ಕೆ ಸಂಬಂದಿಸಿದವರನ್ನು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆತರಲಾಗಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು