Ticker

6/recent/ticker-posts

28ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಮುಂಡಗೋಡ ಪೊಲೀಸರು..!!

ಮುಂಡಗೋಡ:1995ನೇ ವರ್ಷದಲ್ಲಿ ವಂಚನೆ ಪ್ರಕರಣ ದಾಖಲಾಗಿ ಇಲ್ಲಿಯವರೆಗೆ 28 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಮುಂಡಗೋಡ ಪೊಲೀಸರು ಹುಬ್ಪಳ್ಳಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಮೂಲಕ ಹಳೆಯ ಪ್ರಕರಣದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲನಗೌಡ ಕರಬಸವನಗೌಡ ಪಾಟೀಲ(63) ಬಂಧಿತ ಆರೋಪಿಯಾಗಿದ್ದಾನೆ. 1995ನೇವರ್ಷದಲ್ಲಿ ವಂಚನೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಮಲ್ಲನಗೌಡ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಅಲ್ಲದೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಹಲವು ಕಡೆ ವಂಚನೆ ಪ್ರಕರಣದಲ್ಲಿ ಈತನು ಬೇಕಾಗಿದ್ದಾನೆ.  

ಎಸ್ಪಿ ಡಾ. ವಿಷ್ಣುವರ್ಧನ ಎನ್, ಹೆಚ್ಚುವರಿ ಎಸ್ಪಿ ಸಿ.ಟಿ ಜಯಕುಮಾರ, ಡಿವೈಎಸ್ಪಿ ಕೆ.ಎಲ್ ಗಣೇಶ ನಿರ್ದೇಶನದಂತೆ ಇಲ್ಲಿನ ಸಿಪಿಐ ಬಿ ಎಸ್ ಲೋಕಾಪುರ ಪಿಎಸೈಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಚಿ, ಸಿಬ್ಬಂದಿಗಳಾದ ಮಹ್ಮದಸಲಿಂ, ಕೊಲ್ಹಾಪುರ, ಕೋಟೇಶ್ವರ ನಾಗರವಳ್ಳಿ, ಬಸವರಾಜ ಲಮಾಣಿ ಮತ್ತು ತಿರುಪತಿ ಚೌಡಣ್ಣನವರ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.