Ticker

6/recent/ticker-posts

ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಟ್ಟಣದ ಸಚಿನ್ ಕೊರವರ ಪ್ರಥಮ

ಮುಂಡಗೋಡ:ರೈತನ ಮಗನಾಗಿ  ಬಡತದನದಲ್ಲಿ ಬೆಳೆದು ಗದ್ದೆಯಲ್ಲಿ ಕೆಲಸ ಮಾಡುತ್ತಾ ವ್ಯಾಯಾಮ ಮಾಡಿಕೊಂಡಿದ್ದ ಪಟ್ಟಣ ಯುವಕನೊಬ್ಬ ಇಂದು ಕುಮಟಾದಲ್ಲಿ ನಡೆದ ಜಿಲ್ಲಾ ಮಟ್ಟದ. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಪಟ್ಟಣದ ಅಂಬೇಡ್ಕರ್ ಓಣೆಯ ಸಚಿನ್ ಕೊರವರ ಎಂಬ ಯುವಕ ಶನಿವಾರ ಕುಮಟಾದಲ್ಲಿ ಜರುಗಿದ  55 ಕೆಜಿ ವಿಭಾಗದ  ಜಿಲ್ಲಾ ಮಟ್ಟದ ದೇಹದಾರ್ಢ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಬಡ ಕುಟುಂಬದಲ್ಲಿ ಹುಟ್ಟಿದ ಸಚಿನ್ ಕೊರವರ ತಂದೆಯ ಎರಡು ಎಕರೆ ಗದ್ದೆಯಲ್ಲಿ ಪ್ರತಿದಿನ ಕೆಲಸ ಮಾಡುತ್ತಾ ದಿನದ ಒಂದು ಗಂಟೆಯ ಸಮಯದಲ್ಲಿ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ಬಡತನದಲ್ಲಿ  ಶಿಕ್ಷಣ ಪಡೆಯಲಾಗದೆ ಹತ್ತನೆ ತರಗತಿವರೆಗು ಓದಿ ತಮ್ಮ ಗದ್ದೆಯಲ್ಲಿ  ಕೆಲಸ ಮಾಡುತ್ತಿದ್ದವನು ತನ್ನ ಗೆಳೆಯರೆಲ್ಲರು ಒಳ್ಳೆಯ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸದಲ್ಲಿರುವಾಗ ತಾನೂ ಏನಾದರು ಮಾಡಲೇಬೇಕು ಎಂಬ ಛಲದಿಂದ ಕಳೆದ ಮೂರು ನಾಲ್ಕು ವರ್ಷಗಳಿಂದ ವ್ಯಾಯಾಮ ಮಾಡುತ್ತಾ ಬಂದು ವಿವಿಧ ಜಿಲ್ಲೆಗಳಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದು ಒಂದೆರಡು ಕಡೆಗಳಲ್ಲಿ ಎರಡು ಮೂರು ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದ ಆದರೆ ಜಿಲ್ಲಾ ಮಟ್ಟದ ರಾಜ್ಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೇಗಳಲ್ಲಿ ಭಾಗವಹಿಸಬೇಕು ಹೆಸರು ಮಾಡಬೇಕು ಎಂದು ಹೊರಟ ಈ ಯುವಕನಿಗೆ  ಸಿಕ್ಕ ಮೊದಲ ಗೆಲವು ಇದಾಗಿದೆ.

ಕುಮಟಾದ ಗಿಬ್ ವೃತ್ತದ ಬಳಿ ಇರುವ ಮುನ್ಸಿಪಲ್ ವ್ಯಾಯಾಮ ಶಾಲೆ 50ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿ 55 ಕೆಜಿ ತೂಕದ   ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೇಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಫರ್ಧೆಯಲ್ಲಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ 25 ಕ್ಕೂ ಹೆಚ್ಚು ಸ್ಫರ್ಧಿಗಳು ಭಾಗವಹಿಸಿದ್ದರು ಇದರಲ್ಲಿ  ಮುಂಡಗೋಡದ ಯುವಕ ಸಚಿನ್ ಕೊರವರ ಮೊದಲ ಸ್ಥಾನ ಪಡೆದಿದ್ದಾನೆ ತಾಲೂಕಿನ ಕೀರ್ತಿ ಹೆಚ್ಚಿಸಿದ್ದು ಆತನ ಸ್ನೇಹಿತರು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.