ಮುಂಡಗೋಡ:ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೭೩ ನೇ ವರ್ಷದ ಹುಟ್ಟು ಹಬ್ಬ ವನ್ನು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಮಂಜುನಾಥ್ ಹರಮಲಕರ್ ಹಾಗು ಶೇಖರ ಲಮಾಣೆ ನೇತ್ರತ್ವದಲ್ಲಿ ದೇವಸ್ಥಾನಗಳಲ್ಲಿ ವಿಷೇಶವಾಗಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಅಲ್ಪೋಪಹಾರ ಸಿಹಿ ಹಂಚಿ ಪಟಾಕಿ ಸಿಡಿಸಿ ಆಚರಿಸಲಾಯಿತು
ಪಟ್ಟಣ ಪಂಚಾಯ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರು ಮಂಜುನಾಥ ಹರಮಲಕರ ಮಾತನಾಡಿ, ಮೋದಿಯವರು ಪ್ರಧಾನ ಮಂತ್ರಿ ಆದಾಗಿನಿಂದ ದೇಶದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಅದನ್ನು ತಿಳಿದ ಜನರು, ರಾಜಕಾರಣೆಗಳು ಪಕ್ಷಪಾತ ಮಾಡದೇ ಎಲ್ಲರು ಮೋದಿಯವರಿಗೆ ಇಷ್ಟಪಡುತ್ತಾರೆ. ವಿಧಾನ ಸಭೆ ಚುನಾವಣೆ ಬಂದಾಗ ಮಾತ್ರ ದೇಶದೆಲ್ಲೇಡೆ ಬಿಜೆಪಿ ಕಾಂಗ್ರೇಸ್ ಸೇರಿದಂತೆ ವಿವಿದ ಪಕ್ಷಗಳ ಹೆಸರಿನ ಮೇಲೆ ಚುನಾವಣೆ ನಡೆಯುತ್ತವೆ ಆದರೆ ಲೋಕಸಭೆ ಚುನಾವಣೆ ಬಂದಾಗ ಮಾತ್ರ ಎಲ್ಲಾ ಪಕ್ಷದವರು ಮೋದಿ ಯವರಿಗೆ ಆಯ್ಕೆ ಮಾಡುತ್ತಾರೆ. ಅದೆ ಉದ್ದೇಶದಿಂದಲೇ ನಾವು ಮೋದಿಯವರ ಹುಟ್ಟು ಹಬ್ಬವನ್ನು ಮೋದಿ ಭಕ್ತರೆಂದು ಬ್ಯಾನರ್ ಮಾಡಿದ್ದೇವೆ ನಮ್ಮ ಕ್ಷೇತ್ರದಲ್ಲಿ ಕೂಡ ಜನರು ಬೇರೆ ಬೇರೆ ಪಕ್ಷದಲ್ಲಿ ಗುರುತಿಸಿ ಕೊಂಡರು ಮೋದಿಯವರನ್ನು ಆಯ್ಕೆ ಮಾಡುತ್ತಾರೆ ಎಂಬ ಭರವಸೆ ಯಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಸಾನು, ಬಸವರಾಜ ಟನಕೇದಾರ,ಗುಡ್ಡಪ್ಪ ಕಾತೂರ, ವಿಠ್ಠಲ ಬಾಳಂಬೇಡ, ಭರತಗ ಹದಳಗಿ,ಬಾಬಣ್ಣ ತಳವಾರ, ಶಂಕರ್ ಲಮಾಣಿ,ದರ್ಶನ ಕಲಾಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು