Ticker

6/recent/ticker-posts

ಕಾಂಗ್ರೆಸ್ ನತ್ತ ಮುಖ ಮಾಡಿದ ಪ.ಪಂ.ಸದಸ್ಯ ಫಣಿರಾಜ...?

 ಮುಂಡಗೋಡ:ಬಿಜೆಪಿ ಪಕ್ಷದ ಹಿರಿಯ ಧುರೀಣ ಹಾಗೂ ಹಾಲಿ ಪ.ಪಂ.ಸದಸ್ಯ ಫಣಿರಾಜ ಹದಳಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.


ಬಿಜೆಪಿ ಮುಖಂಡರ ನಿರ್ಲಕ್ಷ ಭಾವನೆಯಿಂದ ಆಕ್ರೋಶಗೊಂಡಿರುವ ಫಣಿರಾಜ ಹದಳಗಿ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಪರ ಪ್ರಚಾರ ಮಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಾಳೆ ಮಂಗಳವಾರ ದಿಂದ ಪಟ್ಟಣದಲ್ಲಿ ತಮ್ಮ ಅಭಿಮಾನಿ ಪಡೆಯೊಂದಿಗೆ ಬಹಿರಂಗ ಪ್ರಚಾರ ಮಾಡಲು ಸಿದ್ಧತೆ ನಡೆಸಿರುವುದಾಗಿ ತಿಳಿದಿಬಂದಿದೆ.

ಫಣಿರಾಜ ಹದಳಗಿ ಕಾಂಗ್ರೆಸ್ ಪರ ಮತಯಾಚನೆ ಮಾಡಿದ್ದು ನಿಜವಾದರೆ, ಬಿಜೆಪಿಯ ನಾಗಾಲೋಟಕ್ಕೆ ಸ್ವಲ್ಪ ಹಿನ್ನಡೆ ಆಗಲಿದೆ ಎಂಬ ಮಾತು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.