Ticker

6/recent/ticker-posts

ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದವ ಮುಂಡಗೋಡ ಪೊಲೀಸರ ಬಲೆಗೆ...!


ಮುಂಡಗೋಡ:ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಮುಂಡಗೋಡ ಪೋಲಿಸರು ದಾಳಿ ಮಾಡಿ, ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹರಮನಕೇರಿ ನಿವಾಸಿ ಆಗಿರುವ, ಮಹ್ಮದ ಫಾರೂಕ್‌ ನಜೀರ ಅಹಮದ ಬಂಧಿತ ಆರೋಪಿಯಾಗಿದ್ದಾನೆ.

ಮುಂಡಗೋಡ ತಾಲೂಕಿನ  ಮಳಗಿ ಸಮೀಪ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಯಿಂದ 40 ಸಾವಿರ ರೂಪಾಯಿ ಮೌಲ್ಯದ  500 ಗ್ರಾಂ.ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.  ಸಾಗರದಿಂದ ದಾಸನಕೊಪ್ಪ ಮಾರ್ಗವಾಗಿ ತಾಲೂಕಿನ ಮಳಗಿಯತ್ತ ಬರುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.  ಗಾಂಜಾ ಸಾಗಿಸಲು ಬಳಸಿದ್ದ ಬೈಕ್ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಸಿಪಿಐ ಸಿದ್ದಪ್ಪ ಸಿಮಾನಿ ಮಾರ್ಗದರ್ಶನ ದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರ ಹಾಗೂ ಪಿಎಸ್ಎ‌ಐ ಎನ್. ಡಿ. ಜಕ್ಕಣ್ಣವರ ಮತ್ತು ಸಿಬ್ಬಂದಿಗಳಾದ ಕೋಟೇಶ, ಅಣ್ಣಪ್ಪ   ದಾಳಿಯಲ್ಲಿ ಪಾಲ್ಗೊಂಡಿದ್ದರು.