ಮುಂಡಗೋಡ: ಅಪಘಾತ ದಲ್ಲಿ ಪಟ್ಟಣದ ಮೂವರು ಯುವಕರು ಮೃತಪಟ್ಟ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಶಿವಾಜಿ ಸರ್ಕಲ್ ನಲ್ಲಿ ಗುರುವಾರ ರಾತ್ರಿ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಗಣೇಶ ಗಾಣಿಗೇರ, ವಿರೇಶ ಗಾಣಿಗೇರ ಹಾಗೂ ಶಂಕ್ರಯ್ಯ ಹಿರೇಮಠ ಎಂಬ ಯುವಕರು ತಾಲೂಕಿನ ಪಾಳಾ ಗ್ರಾಮದ ಹತ್ತಿರ ಬುಧವಾರ ರಾತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು.
ಈ ಮೂವರು ಹಿಂದೂ ಸಂಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.
ತಾಲೂಕಾ ಸಂಚಾಲಕ ಪ್ರಕಾಶ ಬಡಿಗೇರ, ವಿಶ್ವನಾತ ನಾಯರ, ಶೇಖರ ಲಮಾಣಿ ವಿಠ್ಠಲ ಬಾಳಂಬೀಡ, ಮಲ್ಲಿಕಾರ್ಜುನ ಗೌಳಿ ಅಯ್ಯಪ್ಪ ಭಜಂತ್ರಿ, ಕೆಂಜೋಡಿ ಗಲಬಿ ಮಂಜುನಾಥ ಮೈಸೂರ, ವಿನಾಯಕ ಯಲೆಗಾರ ಸೇರಿದಂತೆ ಮುಂತಾದವರಿದ್ದರು.



ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು