Ticker

6/recent/ticker-posts

ಮರಕ್ಕೆ ಡಿಕ್ಕಿ ಹೊಡೆದ ಕಾರು, ಸಹೋದರರಿಬ್ಬರ ದುರ್ಮರಣ...

 




ಮುಂಡಗೋಡ:ಮುಂಡಗೋಡ ತಾಲೂಕಿನ ಪಾಳಾ ಜಾತ್ರೆಗೆ ಹೊರಟಿದ್ದ ಇಬ್ಬರು ಯುವಕರು ಕಾರು ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ  ತಾಲೂಕಿನ ಪಾಳಾ ಕ್ರಾಸ್ ಸಮೀಪ ಬುಧವಾರ ರಾತ್ರಿ ಜರುಗಿದೆ.


ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

ಮುಂಡಗೋಡ ಪಟ್ಟಣದ ಬಸವನಬೀದಿಯ ನಿವಾಸಿಗಳಾದ ಗಣೇಶ ಗಾಣಿಗೇರ ಹಾಗೂ ಮಹೇಶ ಗಾಣಿಗೇರ ಸಹೋದರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಕಾರಿನಲ್ಲಿದ್ದ ಇನ್ನೂ ಮೂರು ಜನ ಯುವಕರು ಗಂಭೀರವಾಗಿ ಗಾಯಗೊಂಡಿದ್ದು,  ಮುಂಡಗೋಡ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪಾಳಾ ಜಾತ್ರೆಯು ಮಂಗಳವಾರದಿಂದ ಆರಂಭಗೊಂಡಿದ್ದು, ಬುಧವಾರ ಗ್ರಾಮದಲ್ಲಿ ಪರ್ವ ಇತ್ತು. 

ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಸಹೋದರಿಬ್ಬರ ಸಾವಿಗೆ ಕಂಬನಿ ಮಿಡಿಯುತ್ತಿರುವ ದೃಶ್ಯ ಕಂಡುಬಂತು.