ಮುಂಡಗೋಡ ನಿಂದ ಶಿರಸಿ ಕಡೆಗೆ ಹೊಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ರಭಸಕ್ಕೆ ಬೈಕ್ ಸವಾರ ಹಾನಗಲ್ ತಾಲೂಕಿನ ಸಂಶಿ ಗ್ರಾಮದ ಸುರೇಶ ಇಳಗೇರ ಎಂಬವನು ಸಾವನ್ನಪ್ಪಿದ್ದು ಅನಸೂಯಾ ಎಂಬವರು ಕೈ ಕಾಲುಗಳು ಮುರಿದು ಬಾರಿ ಪ್ರಮಾಣದ ಗಾಯ ಸಂಭವಿಸಿದೆ. ಇನ್ನೊಂದು ಬೈಕ್ ಸವಾರನಿಗೂ ಬಲವಾದ ಗಾಯವಾಗಿದೆ. ಅಪಘಾತ ಪಡಿಸಿದ ಕಾರ್ ಚಾಲಕ ಪರಾರಿಯಾಗಿದ್ದಾನೆ ಕಾರ್ ನಲ್ಲಿ ಬೀಯರ್ ಬಾಟಲಿಗಳು ಪತ್ತೆಯಾಗಿವೆ. ಮೃತಪಟ್ಟ ಬೈಕ್ ಸವಾರನ ಹೆಂಡತಿಯ ತಾಯಿಯ ಅಂತ್ಯಸಂಸ್ಕಾರಕ್ಕೆ ತಾಲೂಕಿನ ಇಂದೂರ ಗ್ರಾಮಕ್ಕೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು