ಮೇಘಾ ಸಮ್ಮಸಗಿ ಅವರು ವಕೀಲ ವೃತ್ತಿಯನ್ನು ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಕೆಲವು ವರ್ಷಗಳ ಹಿಂದೆ ಆರಂಭಿಸಿದ್ದರು. ಮದುವೆಯ ನಂತರ ಸಾಪ್ಟವೇರ್ ಇಂಜಿನಿಯರ್ ಆಗಿದ್ದ ಪತಿಯ ಜೊತೆ ಸ್ಕಾಟಲೆಂಡ್‌ಗೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಕಳೆದ 3-4ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಮರಳಿ ಬಂದು, ಪಟ್ಟಣದಲ್ಲಿ ನೆಲೆಸಿದ್ದರು.
ಮೇಘಾ ಸಮ್ಮಸಗಿ ಅವರಿಗೆ ಇಬ್ಬರು ಪುತ್ರಿಯರಿದ್ದು, ಸಣ್ಣ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ತೆರಳಿರುವುದು ಕುಟುಂಬದಲ್ಲಿ ದುಃಖ ಮಡಗಟ್ಟುವಂತೆ ಮಾಡಿದೆ. ನಾಳೆ ದಿ.5ರಂದು ಬೆಳಿಗ್ಗೆ 10ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಮೇಘಾ ಸಮ್ಮಸಗಿ ನಿಧನಕ್ಕೆ ಮುಂಡಗೋಡದ ವಕೀಲರ ಸಂಘದ ಸದಸ್ಯರು, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.


ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು