Ticker

6/recent/ticker-posts

ತಾಂತ್ರಿಕ ದೋಷದಿಂದ ಅರಣ್ಯದಲ್ಲಿ ಕೆಟ್ಟು ನಿಂತ ಬಸ್ ಪ್ರಯಾಣಿಕರ ಪರದಾಟ

ಮುಂಡಗೋಡ: ತಾಂತ್ರಿಕ ದೋಷದಿಂದ ಮುಂಡಗೋಡ ದಿಂದ ಯಲ್ಲಾಪುರಕ್ಕೆ ತೆರಳುವಾಗ ಕೆ.ಎಸ್.ಆರ್.ಟಿ.ಸಿ ಬಸ್ ತಾಲೂಕಿನ ಮೈನಳ್ಳಿ ಗುಂಜಾವತಿ ಸನಿಹ ಅರಣ್ಯದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದ ಕಾರಣ ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜ್‌ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಅರಣ್ಯದಲ್ಲೆ ಬೇರೆ ಬಸ್‌ ಗಾಗಿ ಕಾದು ಕುಳಿತ ಘಟನೆ ಗುರುವಾರ ಸಾಯಂಕಾಲ ಜರುಗಿದೆ.



ಪ್ರತಿ ದಿನ ಆರು ಗಂಟೆ ಗೆ ತಾಲೂಕಿನಿಂದ ಯಲ್ಲಾಪುರ ತಾಲೂಕಿಗೆ ತೆರಳಬೇಕಾದ ಕೆ.ಎಸ್.ಆರ್.ಟಿ.ಸಿ ಬಸ್‌ ವೊಂದು ಗುರುವಾರ ಸಾಯಂಕಾಲ ಮುಂಡಗೋಡ ದಿಂದ ತೆರಳಿದೆ. ಮೈನಳ್ಳಿ ಗುಂಜಾವತಿ ನಡುವೆಯೇ ಅರಣ್ಯದ ರಸ್ತೆಯಲ್ಲಿ ತಾತ್ರಿಕ ದೋಷ ದಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹತ್ತಿರದಲ್ಲಿ ಯಾವ ಊರು ಇಲ್ಲದೆ ಅರಣ್ಯದಲ್ಲಿ ಕೆಟ್ಟು ನಿಂತಿರುವ ಬಸ್‌ ಪ್ರಯಾಣೆಕರಿಗೆ ಕೆ.ಎಸ್.ಆರ್.ಟಿ.ಸಿ ಅವರು ಯಾವುದೆ ಪರ್ಯಾಯವಾಗಿ ಬೇರೆ ವಾಹನದ ವ್ಯವಸ್ಥೆ ಮಾಡಿಲ್ಲದ ಕಾರಣ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಎರಡು ತಾಸಿಗೂ ಹೆಚ್ಚು ಸಮಯ ದಿಂದ ನಡು ರಸ್ತೆಯಲ್ಲಿ  ಬಸ್‌ಗಾಗಿ ಕಾದು ಕುಳಿತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವುದು ಕಂಡು ಬಂದಿತ್ತು.

ಬಸ್ ಚಾಲಕ ಹಾಗೂ ನಿರ್ವಾಕ ಇಬ್ಬರು ಇಲಾಖೆಯ ಬಸ್ ಗಾಗಿ ಕಾದು ನಿಂತಿರುವುದು ಕಂಡು ಬಂದಿತ್ತು.