Ticker

6/recent/ticker-posts

ಮಗನಿಂದ ತಾಯಿಗೆ ಕುಡಗೋಲಿನಿಂದ ಹಲ್ಲೆ..!ಚಹಾ ಕೊಡಲು ಬಂದ ತಾಯಿಗೇ ಕುಡಗೋಲಿನೇಟು..!!!


ಮುಂಡಗೋಡ: ತಾಯಿಗೆ ಮಗನಿಂದ ಕುಡುಗೋಲಿನಿಂದ  ಹಲ್ಲೆಮಾಡಿದ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿದೆ.

ಹಲ್ಲೆಗೋಳಗಾದ ಮಹಿಳೆಯನ್ನು ಜುಬೇದಾ ಗೌಸುಸಾಬ್ ತೋಟದ ಎಂದು ತಿಳಿದು ಬಂದಿದೆ. ಹಲ್ಲೆ ಮಾಡಿದ ಯುವಕನನ್ನು ಸಲೀಂ ತೋಟದ ಆಗಿದ್ದಾನೆ. ಈತನು ಈ ಮೊದಲು ಒಂದು ಬಾರಿ ತಾಯಿಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಗುರುವಾರ ಆಕಸ್ಮಿಕವಾಗಿ ತಾಯಿ ಮನೆಯಲ್ಲಿ  ಮಗ ಚಹಾ ಕೇಳಿದ್ದಾನೆ ಎಂದು ಚಹಾ ಮಾಡಿ ಕೋಡಲು ಹೋದಾಗ    ತನ್ನ ತಾಯಿಗೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ತಾಯಿ  ಜುಬೇದಾ ತೋಟದ ಅವಳಿಗೆ  ಕುತ್ತಿಗೆಗೆ ಬಲವಾದ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 

ಗಾಯಾಳು ತಾಯಿಯನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.