Ticker

6/recent/ticker-posts

ಸೆಕ್ಯುರಿಟಿ ಗಾರ್ಡ್ ಕೈಕಟ್ಟಿ ಕಳ್ಳತನಕ್ಕೆ ಯತ್ನ...!!!



ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಬಾಗಿಲು ಮುರಿದು ಹಣ ಹಾಗೂ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಗುರುವಾರ ಬೆಳಗಿನ ಜಾವದಲ್ಲಿ ಜರುಗಿದೆ. 

ಮಳಗಿ ಪಂಚಾಯಿತಿ ವ್ಯಾಪ್ತಿಯ  ರೈತರು ವ್ಯವಹಾರ ನಡೆಸುವ ಈ ಸಹಕಾರಿ ಸಂಘಕ್ಕೆ  ನಿನ್ನೆ ರಾತ್ರಿ ಹತ್ತು ಗಂಟೆ ಸಮಯಕ್ಕೆ ಆರು ಜನ ಮುಸುಕು ದಾರಿ ಕಳ್ಳರ ತಂಡವೊಂದು ಬಂದು ಕಾವಲುಗಾರ ಮಾದೇವಪ್ಪ ತಳವಾರ (72) ಈತನನ್ನು ಹೊಡೆದ ನಂತರ ಕಟ್ಟಿ ಹಾಕಿ ಕಳ್ಳತನ ಮಾಡಿದ್ದಾರೆ. 

ಸೊಸೈಟಿಯ ಹಿಂಬದಿಯಿಂದ ಒಳ ನುಗ್ಗಿರುವ ಕಳ್ಳರು ಗ್ಯಾಸ್ ಕಟ್ಟರ್ ನಿಂದ  ಕಬ್ಬಿಣದ ಬಾಗಿಲು ಕಟ್ ಮಾಡಿ ನಂತರ ಕಬ್ಬಿಣದ ಕಪಾಟು ಗಳನ್ನು ಕಟ್ ಮಾಡಿ ಬಂಗಾರ ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ಗುರುವಾರ ನಸುಕಿನ ಜಾವ 4ಗಂಟೆ ಸಮಯಕ್ಕೆ ಸೊಸೈಟಿಯಿಂದ ಹೊಗಿದ್ದಾರೆಂದು ಕಾವಲುಗಾರ ತಿಳಿಸಿದ್ದಾನೆ. 



ಈ ಹಿಂದೆಯೂ ಈ ಸೊಸೈಟಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದರು  ರೈತರು ಹಾಗೂ ಸಾರ್ವಜನಿಕರು ಈ ಸೊಸೈಟಿಯಲ್ಲಿ ಅಪಾರ ಪ್ರಮಾಣದ ಬಂಗಾರದ ಆಭರಣಗಳನ್ನು ಅಡವಿಟ್ಟಿದ್ದರು ಎನ್ನಲಾಗಿದೆ. ಕಳ್ಳತನದ ಸುದ್ದಿ ತಿಳಿದು ಬಂಗಾರ ಅಡವಿಟ್ಟ ಜನರು ಸೊಸೈಟಿಯತ್ತ  ದಾವಿಸುತ್ತಿದ್ದಾರೆ. 

ಕಾರವಾರದಿಂದ ಶ್ವಾನದಳ,ಬೆರಳಚ್ಚು ತಜ್ಞರ ತಂಡ ಬರುತ್ತಿದೆ ಎಂದು ಸಿಪಿಐ  ಸಿದ್ದಪ್ಪ ಸಿಮಾನಿ ತಿಳಿಸಿದ್ದಾರೆ.