Ticker

6/recent/ticker-posts

ನಂದೀಶ್ವರ ನಗರದ ವಿನಾಯಕನಿಗೆ ವಿಶೇಷ ಪೂಜೆಯೊಂದಿಗೆ ಭಕ್ತರಿಗೆ ಸಸಿ ವಿತರಣೆ...!

 


ಮುಂಡಗೋಡ: ಪಟ್ಟಣದ ನಂದೀಶ್ವರ ನಗರ ಗಜಾನನೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿದ್ದ  ವಿನಾಯಕನಿಗೆ ವಿಶೇಷವಾದ ಪೂಜೆ  ಸಲ್ಲಿಸಿ,  ಭಕ್ತರಿಗೆ ಸಸಿಗಳನ್ನು ವಿತರಣೆ ಮಾಡಿ ಪರಿಸರ ಜಾಗೃತಿ ಮೂಡಿಸಿದರು.

 ವಿಶೇಷ ಪೂಜೆ, ಹೋಮ ಹವನ, ಗಣಹೋಮ ಜರುಗಿದವು. ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಗಜಾನನ ಸಮಿತಿಯವರು  ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜ್ಞಾನಪ್ರಜ್ಞಾ  ಅಂಧ ಮಕ್ಕಳು  ಪೂಜಾ ಕಾರ್ಯಕ್ರಮದಲ್ಲಿ ಹಾಗೂ  ವನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಸಿಪಿಐ ಸಿದ್ದಪ್ಪ ಸಿಮಾನಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ,  ಎಲ್ಲರೂ ಸೇರಿ ಶ್ರದ್ಧಾ ಭಕ್ತಿಯಿಂದ ಗಣೇಶ ಹಬ್ಬವನ್ನು ಆಚರಿಸೋಣ. ಆದಷ್ಟು ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಹಾಗೂ ಉತ್ತಮ ಪರಿಸರವನ್ನು ನಿರ್ಮಾಣ ಮಾಡೋಣ ಎಂದರು. ನಂತರ ಸಸಿಗಳನ್ನು ಭಕ್ತರಿಗೆ ನೀಡಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಿಠ್ಠಲ ಮಾನೆ, ಪ್ರಕಾಶ ಬಡಿಗೇರ, ವಿಠ್ಠಲ ಬಾಳಂಬೀಡ, ಸತೀಶ ಹರಿಹರ,  ಸಂಜು ಪಿಸೆ, ಲಕ್ಷ್ಮಣ ಬನಸೋಡೆ, ಪ್ರಮೋದ್ ರಾವ, ಸಂಗಮೇಶ ಗೊಟಗೋಡಿ, ಆನಂದ ಅಂದಲಗಿ, ಪ್ರವೀಣ್ ಹುಲಗೂರ, ವಿರೇಶ ಹುಲಗೂರ, ಮಂಜುನಾಥ ಹುಲಸ್ವಾರ, ಪ್ರಶಾಂತ ಹುಲಗೂರ, ಅರುಣ ಅಂದಲಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.