ನಾಳೆ ದಿ.24ರಂದು ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು.
ಯುವ ಮುಖಂಡ ಪರುಶುರಾಮ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಚವಡಳ್ಳಿ- ಮಲವಳ್ಳಿ ಸೇವಾ ಸಹಕಾರಿ ಸಂಘವು ಈ ಸಾಧನೆ ಮಾಡಿದೆ. ರೈತರಿಗೆ ಸಾಲ ನೀಡುವುದು, ವಸೂಲಾತಿ ಹಾಗೂ ಗೊಬ್ಬರ ಕೊಡಿಸುವಲ್ಲಿ ಸೊಸೈಟಿ ಅಧ್ಯಕ್ಷ ಸಹಿತ ಸದಸ್ಯರು ಹಾಗೂ ಆಡಳಿತ ಮಂಡಳಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರ ಫಲವಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಯುವಮುಖಂಡ ಪರುಶುರಾಮ ತಹಶೀಲ್ದಾರ್ ಸಚಿವ ಶಿವರಾಮ ಹೆಬ್ಬಾರ್ ಅವರ ಅಭಿಮಾನಿಯಾಗಿದ್ದು, ಅವರು ಇಟ್ಟಿರುವ ಭರವಸೆಯಂತೆ ಸಂಘದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿ, ಸಚಿವರ ಹೆಸರು ಉಳಿಸುವಂತ ಕೆಲಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.


ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು