ಪಟ್ಟಣದ ನೆಹರು ನಗರದ ಮಲ್ಲಿಕ್ ಸಾಬ್ ಅಲ್ಲಿ ಸಾಬ್ ನದಾಪ್ ಎಂಬುವರ ಆಕಳು ಸಾವನ್ನಪ್ಪಿದೆ. ಎಂದಿನಂತೆ ಸೋಮವಾರ ಬೆಳಿಗ್ಗೆ ಮೇಯಲು ಹೋದ ಆಕಳು ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಶಿಶುನಾಳ ಶರೀಫ ದೇವಸ್ಥಾನದ ಸನಿಹದಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಅರ್ತಿಂಗ್ ತಂತಿಗೆ ವಿದ್ಯುತ್ ಹರಿದು ಹತ್ತಿರದಲ್ಲಿ ಮೇಯುತ್ತಿದ್ದ ಆಕಳು ತಂತಿಗೆ ತಗುಲಿ ಸ್ಥಳದಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಹೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.ಮೃತಪಟ್ಟ ಆಕಳು ಸುಮಾರು ಐವತ್ತು ಸಾವಿರ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು