Ticker

6/recent/ticker-posts

ಮರಾಠಾ ಮುಖಂಡ ಎಲ್.ಟಿ.ಪಾಟೀಲರಿಗೆ ನಿಗಮದ ಅಧ್ಯಕ್ಷ ನೀಡುವಂತೆ ಒತ್ತಾಯ..!!!

 


ಮುಂಡಗೋಡ: ತೆರವುಗೊಂಡ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ನಿಗಮ ಮಂಡಳಿಗೆ ಮರಾಠಾ ಸಮಾಜದ ಮುಖಂಡ ಎಲ್.ಟಿ.ಪಾಟೀಲ್ ಅವರಿಗೆ ನೀಡುವಂತೆ ಬಿಜೆಪಿಯಲ್ಲಿ ಒತ್ತಡ ಶುರುವಾಗಿದೆ.

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎಲ್.ಟಿ.ಪಾಟೀಲ್ ಕಾಂಗ್ರೆಸ್ ನಲ್ಲಿ ಅವರಿಗೆ ಒಳ್ಳೆಯ ಅವಕಾಶ ಇತ್ತು ಅದನ್ನು ತೆಜಿಸಿ ಅನಂತ ಕುಮಾರ ಹೆಗಡೆ ಅವರ ಮುಖಂಡತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು ನಂತರ ಒಳ್ಳೆಯ ಸ್ಥಾನಮಾನ ನೀಡುವುದಾಗಿ ಭರವಸೆ ನಿಡಿದ್ದರು. ಈ ವರೆಗೂ ನೀಡಲಾಗಿಲ್ಲಾ ತಾಲೂಕಿನಲ್ಲಿ ಸುಮಾರು ೧೫ ಸಾವಿರ ಮರಾಠಾ ಸಮುದಾಯ ಜನರಿದ್ದು ಎಲ್.ಟಿ.ಪಾಟೀಲ್ ಅವರ ಸಮುದಾಯದವರೆ ಆಗಿದ್ದರಿಂದ ಅವರಿಗೆ ಇದುವರೆಗೆ ಯಾವುದೇ ಪ್ರಮುಖವಾದ ಹುದ್ದೆಯನ್ನು ನಿಡಲಿಲ್ಲ ಕಳೆದ ಬಾರಿ ಎಮ್.ಎಲ್.ಸಿ ಅಭ್ಯರ್ಥಿ ಆಗಲು ಪ್ರಯತ್ನಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಬೇರೆಯವರ ಪಾಲಾಯಿತು.

ಇನ್ನಾದರು ಎಲ್.ಟಿ.ಪಾಟೀಲ ಅವರಿಗೆ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ಖಾಲಿ ಆಗಿರುವ ನಿಗಮ ಮಂಡಳಿಯ ಸ್ಥಾನಕ್ಕೆ ಅವಕಾಶ ಕಲ್ಪಿಸುವಂತೆ ಎಲ್.ಟಿ.ಪಾಟೀಲ ಅಭಿಮಾನಿಗಳ ಬಳಗ ಆಗ್ರಹಿಸಿದೆ.

ಈಗಾಗಲೇ ಯಲ್ಲಾಪುರ ಭಾಗದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಎಮ.ಎಲ್ ಸಿ ಸ್ಥಾನಕ್ಕೆ ಶಾಂತಾರಾಮ್ ಸಿದ್ದಿ ಇರುವುದರಿಂದ. ಮುಂಡಗೋಡದಲ್ಲಿ  ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎಲ್.ಟಿ.ಪಾಟೀಲ್ ಅವರಿಗೆ ಸಿಗುವಂತೆ ಆಗಲಿ ಎಂಬುದು ಬಿಜೆಪಿಯವರ  ಅನಿಸಿಕೆ ಆಗಿದೆ.

ನಾಗರಾಜ ಬೆಣ್ಣೆ, ಶಿವಾಜಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ;ಬಿಜೆಪಿ ಪಕ್ಷದಲ್ಲಿ ನಮ್ಮ ಸಮಾಜದವರಿಗೆ ಯಾವುದೆ ಸ್ಥಾನಮಾನ ನೀಡಿಲ್ಲಾ. ಪಕ್ಷ ನಮ್ಮನ್ನು ಬಳಸಿಕೊಳ್ಳುತ್ತಿದೆ. ಇನ್ನಾದರು ತೆರವುಗೊಂಡ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ನಿಗಮ ಮಂಡಳಿಯ ಸ್ಥಾನಕ್ಕೆ ಹಿರಿಯ ಮುಖಂಡರು ಆದ ಎಲ್.ಟಿ.ಪಾಟೀಲ ಅವರಿಗೆ ನೀಡಬೇಕು. ನೀಡಿದರೆ ನಮ್ಮ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠ ವಾಗಲು ಅನುಕೂಲ ಆಗುತ್ತದೆ.