ಹುಬ್ಬಳ್ಳಿಯ ರಾಕೇಶ ಗುಂಜಾಳ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಆ 10 ರಂದು ಹುಬ್ಬಳ್ಳಿಯ ದೇವರಾಮ್ ಖಲವಾ ಎಂಬಾತನೇ ಹಣ ಕಳೆದುಕೊಂಡಿದ್ದರು.ಇವರು ಆನವಟ್ಟಿ, ಹಾನಗಲ್ ಮತ್ತು ಮುಂಡಗೋಡ ಬಟ್ಟೆ ಅಂಗಡಿಗಳಲ್ಲಿ ಸಂಗ್ರಹಿಸಿದ ಹಣದೊಂದಿಗೆ ಮುಂಡಗೋಡ ಬಸ ನಿಲ್ದಾಣದಿಂದ ಹುಬ್ಬಳ್ಳಿ ಬಸ್ ಹತ್ತುವಾಗ ಹಿಂದಿನಿಂದ ಮಾಸ್ಕ ಹಾಕಿಕೊಂಡು ಬಂದು ಗಮನ ಬೇರೆಡೆ ಸೆಳೆದು ಬ್ಯಾಗಿನ ಜೀಪ ತೆಗೆದು ಅದರಲ್ಲಿದ್ದ 1,68,442 ಹಣ ಮತ್ತು ಮೂರು ಚಕ್ ನ್ನು ಬ್ಯಾಗ ಸಮೇತ ಪರಾರಿಯಾಗಿದ್ದಾನೆಂದು ದೇವರಾಮ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಪಿಐ ಎಸ ಎಸ ಸಿಮಾನಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಬಲೆ ಬಿಸಿದ್ದಾರೆ.
ಸಿದ್ದಪ್ಪ ಎಸ್. ಸಿಮಾನಿ ಪಿ.ಐ. ಮುಂಡಗೋಡ ಪೊಲೀಸ್ ಠಾಣೆ ಬಸವರಾಜ ಮಬನೂರ ಪಿ.ಎಸ್.ಐ. ಎನ್.ಡಿ. ಜಕ್ಕಣ್ಣವರ ಪಿ.ಎಸ್.ಐ. ಪ್ರೊಫೆಷನರಿ ಪಿ.ಎಸ್.ಐ ಮಹೇಶ ಮಾ ಎ.ಎಸ್.ಐ ಮಣಿಮಾಲನ ಮೇಸ್ತ್ರಿ, ಹಾಗೂ ಸಿಬ್ಬಂದಿಗಳಾದ ಮಹ್ಮದಸಂ, ಕೂಟೀಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ್, ಲಮಾಣಿ, ಶಂಭುರಂಗ, ಹಾವೂರು, ಕಾಶಿರಾಯ ಕಾವ್ಯಾಳ, ಸಂಗಮೇಶ ದೊಡ್ಡವಾಡ, ಎಎಬಿಸಿ ನಾಗರಾಜ ಹಾಗೂ ಕಾರವಾರ ತಾಂತ್ರಿಕ ಸಿಡಿಆರ್ ವಿಭಾಗದ ಉದಯ ಗುನಗಾ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು