ಮುಂಡಗೋಡ: ಈ ಬಾರಿ ರಾಜ್ಯದ ಜನತೆಯೇ ಕುಮಾರಸ್ವಾಮಿಯವರಿಗೆ ಪೂರ್ಣಾವಧಿ ಅಧಿಕಾರ ನೀಡಬೇಕೆಂದು ನಿಶ್ಚಯ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಗಂಗಾಧರ ಗೌಡ್ರು ಹೇಳಿದರು.
ಅವರು ಭಾನುವಾರ ಸಂಜೆ ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ನೂತನವಾಗಿ ಜೆಡಿಎಸ್ ಕಾರ್ಯಾಲಯವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ನನಗೆ ೧೧ ಜಿಲ್ಲೆಯ ಜವಾಬ್ದಾರಿ ಪಕ್ಷ ನೀಡಿದೆ. ಈ ಜಿಲ್ಲೆಯನ್ನು ಈಗಾಗಲೇ ಪ್ರವಾಸ ಮಾಡಿ ಬಂದಿದ್ದೇನೆ. ನೇರಿದ ಜನರೆ ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ, ಕಾಂಗ್ರೆಸಗೆ ಮತ ನೀಡುವುದಿಲ್ಲ. ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಸಂಪೂರ್ಣ ಅವಧಿಗೆ ಅಧಿಕಾರ ನೀಡಬೇಕು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಆಗಬೇಕು ಎಂದು ತುದಿಗಲಿನಲ್ಲಿ ನಿಂತಿದ್ದಾರೆ. ಅವರಿಂದ ನಾವುಗಳು ಬಿಕ್ಷೆ ಹಾಕಿಸಿಕೊಳ್ಳುವದೊಂದೆ ಬಾಕಿ ಇದೆ. ಈ ಕ್ಷೇತ್ರದಿಂದ ಸಂತೋಷ ರಾಯ್ಕರಿಗೆ ೨ ಬಾರಿ ಅನ್ಯಾಯವಾಗಿದೆ. ಮುಂದಿನದಲ್ಲಿ ಈ ಕ್ಷೇತ್ರದವರಗೆ ಪಕ್ಷದ ಟಿಕೆಟ ನೀಡಲಾಗುವುದು ಎಂದು ನಮ್ಮ ನಾಯಕರು ಹೇಳಿದ್ದಾರೆ. ಅನ್ಯಾಯ ಸರಿ ಪಡಿಸಿ ಕ್ಷೇತ್ರದ ಎಲ್ಲಾ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿ ಎಂದು ಹೈಕಮಾಂಡ ಸಂತೋಷ ಅವರಿಗೆ ತಿಳಿಸಿದ್ದಾರೆ ಎಂದರು.
ಮುಖಂಡ ಮುನಾಫ್ ಮಿರ್ಜಾನಕರ ಮಾತನಾಡಿ, ಪಕ್ಷದಲ್ಲಿ ಕೆಲಸ ಮಾಡಿ. ನಂತರ ಕ್ಷೇತ್ರದಲ್ಲಿ ಚುನಾವಣೆಯ ಅಭ್ಯರ್ಥಿ ಎಂದು ಹೇಳಿಕೊಳ್ಳಲಿ ಅದನ್ನು ಬಿಟ್ಟು ಸಂಘಟನೆ ಮಾಡಿದವರು ಬಿಟ್ಟು ಯಾರೋ ಮಾಡಿದ ಸಂಘಟನೆಯಲ್ಲಿ ನಾನು ಅಭ್ಯರ್ಥಿ ಎಂದು ಹೇಳಿಕೊಂಡರೆ ಆಗುವುದಿಲ್ಲಾ. ಎರಡು ಬಾರಿ ನಮಗೆ ಅನ್ಯಾಯವಾಗಿದೆ. ಮತ್ತೇ ಈ ಬಾರಿ ಅನ್ಯಾಯದಾರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರುವುದಿಲ್ಲ ಎಂದರು.
ಟಿಕೆಟ ಆಕಾಂಕ್ಷಿ ಸಂತೋಷ ರಾಯ್ಕರ ಮಾತನಾಡಿ, ಈ ಹಿಂದಿನ ಚುನಾವಣೆಯಲ್ಲಿ ಮನಸ್ತಾಪದಿಂದ ಪಕ್ಷದಿಂದ ದೂರವಾಗಿದೆ. ನಮ್ಮ ನಾಯಕರು ಮುಖಂಡರು ಕೆರದಿದ್ದರಿಂದ ಮತ್ತೇ ಪಕ್ಷಕ್ಕೆ ಬಂದಿದ್ದೇನೆ. ಪಕ್ಷದ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನಗೆ ಟಿಕೆಟ್ ಕೊಡುವ ಭರವಸೆಯನ್ನು ನೀಡಿ ನನ್ನ ಕ್ಷೇತ್ರದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನನಗೆ ವಿಶ್ವಾಸ ವಿದೆ ಈ ಬಾರಿ ನನಗೆ ಟಿಕೆಟ ನೀಡುತ್ತಾರೆಂದು ಅಲ್ಲದೆ ಜನರ ಬೆಂಬಲ ಇದೆ ಎಂಬುವುದು ನಮ್ಮ ನಾಯಕರಿಗೆ ಗಮನಕ್ಕೆ ಇದೆ. ಕಾಂಗ್ರೆಸ್ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿ ನಾನು ಗೆಲ್ಲುತ್ತೇನೆ. ನಮ್ಮ ಕ್ಷೇತ್ರದಲ್ಲಿ ಜನರು ನನಗೆ ಸಹಕರಿಸುತ್ತಾರೆ ಎಂಬ ಭರವಸೆ ಇದೆ. ಈಗಾಗಲೇ ಪಕ್ಷದ ಸಂಘಟನೆ ಮಾಡಲಾಗುತ್ತಿದೆ ಮುಂದಿನ ತಿಂಗಳಿನಲ್ಲಿ ಪಕ್ಷದ ಹಿರಿಯ ಮುಖಂಡನ್ನು ತಾಲೂಕಿನಲ್ಲಿ ಕರೆಸಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದರು.
ಮುಖಂಡರಾದ ತುಕಾರಾಮ ಗುಡಕರ್ ಮುತ್ತಣ್ಣಾ ಸಂಗೂರಮಠ ಮಾತನಾಡಿದರು. ಸುಧಾಕರ ನಾಯ್ಕ, ಆಶಾ ರಾಯ್ಕರ, ಸೈಯದ ಮುಜೀಪ್, ರಫೀಕ ಮಲ್ಲಿಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು