ಮಳಗಿ ಗ್ರಾಮ ಪಂಚಾಯತ 17 ಜನರ ಸದಸ್ಯರ ಬಲವನ್ನು ಹೊಂದಿದೆ. ಅದರಲ್ಲಿ ಕಾಂಗ್ರೇಸ್ ಬೆಂಬಲಿತ ಸದಸ್ಯ ಪ್ರದೀಪ್ ಕೊಳಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷರೂ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿಲ್ಲ, ಹಾಗೂ ನಮ್ಮ ವಾರ್ಡ್ ಗಳ ಅಭಿವೃದ್ಧಿಯ ಕೆಲಸಗಳಿಗೆ ಸಮರ್ಪಕವಾಗಿ ಸ್ಪಂಧಿಸುತ್ತಿಲ್ಲ ಎಂದು ಇತ್ತೀಚೆಗೆ ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಸದಸ್ಯರುಗಳು ಶಿರಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಅವಿಶ್ವಾಸ ಮಂಡನೆಗೆ ಅವಕಾಶ ಕೊರಿದ್ದರು. ಅದರಂತೆ ಸೋಮವಾರ ಅವಿಶ್ವಾಸ ಮಂಡನೆ ಸಭೆಯನ್ನು ನಡೆಸಲಾಯಿತು. ಹನ್ನೆರಡು ಜನ ಸದಸ್ಯರು ಅವಿಶ್ವಾಸ ಸಭೆಗೆ ಹಾಜರಾಗಿ ಅಧ್ಯಕ್ಷ ಪ್ರದೀಪ್ ವಿರುದ್ಧವಾಗಿ ಅವಿಶ್ವಾಸ ಮಂಡಿಸಿದರು. ಇನ್ನೂ ಅಧ್ಯಕ್ಷ ಹಾಗೂ ಇತರೆ ನಾಲ್ಕು ಜನ ಸದಸ್ಯರು ಸಭೆಗೆ ಬಾರದೆ ಗೈರು ಹಾಜರಾಗಿದ್ದರು.
ಶಿರಸಿ ಸಹಾಯಕ ಆಯುಕ್ತ ಡಿ.ದೇವರಾಜ, ತಹಸೀಲ್ದಾರ್ ಶಂಕರ ಗೌಡಿ, ಪಿಡಿಒ ಶ್ರೀನಿವಾಸ ಮರಾಠೆ, ರಾಘವೆಂದ್ರ ಗಿರೆಡ್ಡಿ ಅವಿಶ್ವಾಸ ಸಭೆಯಲ್ಲಿ ಉಪಸ್ಥಿತರಿದ್ದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು