ಖಡಕ್ ಎಸ್.ಪಿ ಡಾ.ಸುಮನ್ ಪನ್ನೇಕರ್ ಅವರ ಕಟ್ಟುನಿಟ್ಟಿನ ಕ್ರಮದಿಂದ ಇಷ್ಟು ದಿನ ಬಂದಾಗಿದ್ದ ಮಟ್ಕಾ ಹಾವಳಿಯನ್ನು ಮತ್ತೆ ಆರಂಭಿಸಲು ಹಾವೇರಿ ಮೂಲದ ವ್ಯಕ್ತಿಯೊಬ್ಬ ಮುಂದಾಗಿದ್ದಾನಂತೆ.
ಮುಂಡಗೋಡ ತಾಲೂಕಿನಲ್ಲಿ ಬಡವರು ನೆಮ್ಮದಿಯ ಜೀವನ ನಡೆಸುತ್ತಿರುವಾಗ ಮಟ್ಕಾ ಮತ್ತೆ ಆರಂಭವಾದರೆ ಅದೆಷ್ಟೋ ಕುಟುಂಬಗಳು ಬೀದಿಗೆ ಬರಲಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎಸ್.ಪಿ ಮೇಡಂ ಅವರು ಮುಂಡಗೋಡ ತಾಲೂಕಿನಲ್ಲಿ ಅನಿರೀಕ್ಷಿತ ದಾಳಿ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಜನರು ಮನವಿ ಮಾಡುತ್ತಿದ್ದಾರೆ.
ಕದ್ದುಮುಚ್ಚಿ ಆಟ ನಡೆದಿದೆಯಂತೆ:
ಮುಂಡಗೋಡ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ನಂಬಿಕಸ್ಥ ಅಂಗಡಿಗಳಲ್ಲಿ ಕದ್ದುಮುಚ್ಚಿ ಮಟ್ಕಾ ಬರೆಯಲಾಗುತ್ತಿದೆಯಂತೆ. ಕೆಲವು ಚಪ್ಪಲಿ ಅಂಗಡಿ, ಪಾನ ಅಂಗಡಿ, ಕಿರಾಣಿ ಅಂಗಡಿಗಳು ಸದ್ಯದ ಹಾಟಸ್ಪಾಟಗಳಾಗಿವೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಪೊಲೀಸರು ದಾಳಿ ಮಾಡಿದಾಗ ಗೊತ್ತಾಗುತ್ತದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು