Ticker

6/recent/ticker-posts

ಕಾರು ಬೈಕ್‌ ಅಪಘಾತ, ಬೈಕ್‌ ಸವಾರ ಗಂಭೀರ ಗಾಯ..!!

 


ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಹೋಂಡಾ ಶೋರೂಮ್ ಹತ್ತಿರ ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಭೀರ ಗಾಯಗೊಂಡ ಬೈಕ ಸವಾರನನ್ನು ಮಹೇಶ ಪುಂಡಲೀಕ ಅರ್ಕಸಾಲಿ ತಾಲೂಕಿನ ಲಕ್ಕೋಳ್ಳಿ ಗ್ರಾಮದವರಾಗಿದ್ದಾರೆ. ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಕಾರು ಹಾಗೂ ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಹೊರಟಿದ್ದ ಬೈಕ್ ನಡುವೆ ಡಿಕ್ಕಿ ಸಂಬಂವಿಸಿದೆ. ಇದರಿಂದ ಬೈಕ್ ಸವಾರನಿಗೆ ತಲೆಯ ಭಾಗಕ್ಕೆ  ಗಂಬೀರ ಗಾಯಗೊಂಡ ಪರಿಣಾಮ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

108 ಆಂಬುಲೆನ್ಸನ ವೈದ್ಯಕೀಯ ತಂತ್ರಜ್ಞ ಧನರಾಜ್ ಹಾಗೂ ಸಿಬ್ಬಂದಿ ಗಾಯಾಳುವನ್ನು ಹುಬ್ಬಳ್ಳಿಯ ಆಸ್ಪತ್ರೆಗೆ  ಕರೆದೊಯ್ದಿದ್ದಾರೆ