Ticker

6/recent/ticker-posts

ಕಾಣಿಯಾದ ಮಗಳನ್ನು ಹುಡುಕಿಕೊಡುವಂತೆ ತಂದೆಯಿಂದ ಪೊಲೀಸ್ ಠಾಣೆಯಲ್ಲಿ ದೂರು

 


ಮುಂಡಗೋಡ: ಕೋಡಂಬಿ ಗ್ರಾಮದಲ್ಲಿ ಯುವತಿಯೊಬ್ಬಳು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಡಂಬಿ ಗ್ರಾಮದ ಉಮ್ಮಿಸಲ್ಮಾ ಕಾಣೆಯಾದ ಯುವತಿ. ಆಗಸ್ಟ್ ೧೬ ರಂದು  ಊಟ ಮಾಡಿ ಮನೆಯ ಹಿತ್ತಲಿಗೆ ಹೋದವಳು ಮರಳಿ ಮನೆಗೆ ಬಾರದೆ. ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ. ತನ್ನ ಮಗಳನ್ನು ಹುಡುಕಿ ಕೊಡಿ ಎಂದು ಯುವತಿಯ ತಂದೆ ಹಸನಭಾಷಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.