Ticker

6/recent/ticker-posts

ತೆರವುಗೊಂಡ ಸಾರಿಗೆ ಸಂಸ್ಥೆಯ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಎಲ್.ಟಿ ಪಾಟೀಲ್ ಅವರಿಗೆ ನೀಡಬೇಕು ಎಂದು ಮರಾಠಾ ಸಮುದಾಯದ ಮುಖಂಡರಿಂದ ಪತ್ರಿಕಾಗೋಷ್ಠಿ

 




ಮುಂಡಗೋಡ: ಜಿಲ್ಲೆಯಲ್ಲಿಯೇ ಮರಾಠಾ ಸಮುದಾಯದವರಿಗೆ ಯಾವುದೆ ಸ್ಥಾನಮಾನವನ್ನು ನೀಡಿಲ್ಲ. ಆದ ಕಾರಣ ಈಗಾಗಲೇ ತೆರವುಗೊಂಡ ವಾಯುವ್ಯ ಸಾರಿಗೆ ಸಂಸ್ಥೆಯ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಮರಾಠಾ ಸಮಾಜದ ಮುಖಂಡ ಎಲ್.ಟಿ.ಪಾಟೀಲ್ ಅವರಿಗೆ ನೀಡುವಂತೆ ತಾಲೂಕು ಮಾರಾಠಾ ಸಮಾಜದ ಮುಖಂಡರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮರಾಠಾ ಸಮಾಜದ ಮುಖಂಡರು ಆಗ್ರಹಿಸಿದರು. 

ಸಮಾಜದ ಮುಖಂಡ ಡಿ.ಎಫ್ ಮಡ್ಲಿ ಮಾತನಾಡಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎಲ್.ಟಿ.ಪಾಟೀಲ್ ಅವರು ಈ ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು. ಆಗ ಅನಂತ ಕುಮಾರ ಹೆಗಡೆ ಅವರು ಬಿಜೆಪಿಗೆ ಕರೆತಂದರು ಆದರೆ ಈವರೆಗೂ ಅವರಿಗೆ ಯಾವುದೇ ಸರಕಾರ ಹುದ್ದೆ ದೊರಕಿಲ್ಲ. ಈಗಿನ ಖಾಲಿ ಇರುವ ಸಾರಿಗೆ ಸಂಸ್ಥೆಯ ನಿಗಮದ ಹುದ್ದೆ ನೀಡುವಂತೆ ಸರಕಾರಕ್ಕೆ ಒತ್ತಾಯ ಪಡಿಸುತ್ತೇವೆ ಎಂದರು.

ಯುವ ಮುಖಂಡರಾದ ನಾಗರಾಜ ಬೆಣ್ಣೆ ಮಾತನಾಡಿ: ಬಿಜೆಪಿ ಸರಕಾರ ಈಗಾಗಲೇ ಮಾರಾಠಾ ಸಮಾಜದ ನಿಗಮ ಮಂಡಳಿಯನ್ನು ಸ್ಥಾಪಿಸಿಕೊಟ್ಟಿದೆ. ವಾ.ಕ.ರಾ.ರ.ಸಾ ನಿಗಮದ ಸ್ಥಾನ ತೆರವುಗೊಂಡಿದೆ. ಐದಾರು ವರ್ಷದ ಹಿಂದೆ ಎಂ.ಎಲ್‌.ಎ ಟಿಕೆಟ್ ಮಾರಾಠಾ ಸಮಾಜಕ್ಕೆ ನೀಡುತ್ತೇವೆ ಎಂದು ಭರವಸೆ ನೀಡಿ ಬಿಜೆಪಿಗೆ ಪಕ್ಷಕ್ಕೆ ಬರಮಾಡಿಕೊಂಡರು. ಕಾರಣಾಂತರದಿಂದ ವಿ.ಎಸ್ ಪಾಟೀಲರಿಗೆ ಟಿಕೆಟ್ ನೀಡಿದರು. ವಿ.ಎಸ್ ಪಾಟೀಲರು ತಮಗೆ ಟಿಕೆಟ್ ನೀಡಿದಾಗ ಟಾಯರ ಸುಟ್ಟು ಪ್ರತಿಭಟನೆ ಮಾಡಿದರು ಆಗ ಪಕ್ಷ ಅವರು ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲ ಎಂದು ತಿಳಿಸಿದ್ದಾರೆ.  ಆ ಸಮಯದಲ್ಲಿ ಎಲ್.ಟಿ.ಪಾಟೀಲ್ ಬೆಂಬಲಿಗರು ಅಸಮಾಧಾನಗೊಂಡು ಇತರೆ ಸಮಾಜದವರು ಸೇರಿ ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿ ಪಕ್ಷ ಬಲಾಢ್ಯವಾಗಬೇಕು ಮುಂದಿನ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರರು ಆಯ್ಕೆಯಾಗಿ ಬಿಜೆಪಿ ಸರಕಾರ ಬರಬೇಕು. ಇದೇಲ್ಲ ಆಗಬೇಕಾದರೆ ನಾವೆಲ್ಲರೂ ಶತ ಪ್ರಯತ್ನಗಳು ಮಾಡಬೇಕು. ಮಾರಾಠಾ ಸಮಾಜಕ್ಕೆ ಇದುವರೆಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲಾ. ಆದ ಕಾರಣ ತೆರವುಗೊಂಡ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನಮ್ಮ  ಸಮಾಜದ ಮುಖಂಡನಿಗೆ ನೀಡಿದರೆ ಬಿಜೆಪಿ ಪಕ್ಷ ಗಟ್ಟಿಯಾಗುತ್ತದೆ. ಅಧ್ಯಕ್ಷ ಸ್ಥಾನ ಕೊಡದಿದ್ದರೆ ತೊಂದರೆ ಆಗುತ್ತದೆ. ಆದಕಾರಣ ಸಮಾಜಕ್ಕೆ ಸ್ಥಾನಮಾನ ನೀಡುವಂತೆ ಸರಕಾರಕ್ಕೆ ಕೈ ಮುಗಿದು ಕೇಳಿ ಕೊಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗಿರೀಶ ಓಣಿಕೇರಿ, ವಿಠ್ಠಲ ಬಾಳಂಬೀಡ, ಆರ್. ನಾಣೋಜಿ, ನಾಗರಾಜ ಸಂಕನಾಳ ಮತ್ತು ಶಿವರಾಜ ಸುಬಾಯ್ಯವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.