ತಾಲೂಕಿನ ಸನವಳ್ಳಿ ಗ್ರಾಮದ ಮಹಾಂತೇಶ ಅರ್ಜುನ ಆರೆಗೊಪ್ಪ (೪೩) ಬಂಧಿತ ಆರೋಪಿಯಾಗಿದ್ದಾನೆ.
ಜು.೨೬ರಂದು ರಾತ್ರಿ ವೇಳೆ ಯಾರೋ ಕಳ್ಳರು ಕಬ್ಬಿಣದ ರಾಡ್‌ನಿಂದ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿ ೪೦ ಗ್ರಾಂ ತೂಕದ ಎರಡು ಬಂಗಾರದ ಸರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಗ್ರಾಮಸ್ಥರು ಪೊಲೀಸ್ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಅದೆ ಗ್ರಾಮದ ಮಹಾಂತೇಶ ಎಂಬುವನನ್ನು ಬಂಧಿಸಿ ಅವನಿಂದ ಕಳ್ಳತನ ಮಾಡಿದ್ದ ಬಂಗಾರದ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಡಿವೈಎಸ್‌ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ.ಸಿದ್ದಪ್ಪ ಸಿಮಾನಿ, ಪಿಎಸ್‌ಐ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ,ಸಿಬ್ಬಂದಿಗಳಾದ ಮಣಿಮಾಲಿನ್ ಮೇಸ್ತ್ರಿ ಪೊಲೀಸ ಸಿಬ್ಬಂದಿಗಳಾದ ಮಹ್ಮದ ಸಲಿಂ, ಗಣಪತಿ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಬಸವರಾಜ ಲಮಾಣಿ, ವಿವೇಕ ಪಟಗಾರ, ಸಹದೇವ, ಶರತ್ ದೇವಳಕ್ಕಿ, ತಿರುಪತಿ ಚೌಡಣ್ಣವರ, ಅರುಣ ಬಾಗೇವಾಡಿ, ಮಹಾಂತೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು