Ticker

6/recent/ticker-posts

ಅಡಿಕೆ ಕಳ್ಳನನನ್ನು ಬಂಧಿಸಿದ ಮುಂಡಗೋಡ ಪೊಲೀಸರು..!!


ಮುಂಡಗೋಡ:ಅಡಿಕೆ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ  ಅಡಿಕೆಯನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನಿಂದ ಎರಡುವರೆ ಲಕ್ಷ  ಮೌಲ್ಯದ ಅಡಿಕೆ ಹಾಗೂ   ವಾಹನ ವಶಪಡಿಸಿಕೊಂಡ ಘಟನೆ ಜರುಗಿದೆ.

ತಾಲೂಕಿನ ಕೊಪ್ಪಾ ಇಂದಿರಾನಗರ ಗ್ರಾಮದ ಪಕ್ಕಿರೇಶ ದೊಡ್ಮನಿ ಬಂಧಿತ ಆರೋಪಿಯಾಗಿದ್ದಾನೆ. ಈತ ಮುಂಡಗೋಡದ ರಮೇಶ ಕಾಮತ್ ಹಾಗೂ ನವೀನ ಹುದ್ಲಮನಿ ಎಂಬುವರ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ್ದಾನೆ.

ಘಟನೆ ವಿವರ: ಪಕ್ಕಿರೇಶ ದೊಡ್ಮನಿ ಇವನು   ಹಳೂರಿನ ತೋಟದ ಮನೆಯಲ್ಲಿದ್ದ ರಮೇಶ ಕಾಮತ್ ಹಾಗೂ ನವೀನ್ ಹುದ್ಲಮನಿ ಅವರ ಅಡಿಕೆಯನ್ನು ಕಳ್ಳತನ ಮಾಡಿ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಮನೆಗೆ  ಸಾಗಿಸಿದ್ದಾನೆ. ಎರಡು ಮೂರು ದಿನಗಳ ನಂತರ ಯಲ್ಲಾಪುರ ತಾಲೂಕಿನ ಗಣೇಶ ಪ್ರಸಾದ್ ಟ್ರೇಡರ್ಸ ಎಂಬುವರಿಗೆ ಮಾರಾಟ ಮಾಡಿ ಬಂದ ಹಣದಿಂದ ೮೦ ಸಾವಿರ ನೀಡಿ ಹೊಸ ಟಾಟಾ  ವಾಹನ ಖರೀದಿ ಮಾಡಿದ್ದಾನೆ. ಪೈನಾನ್ಸನಲ್ಲಿ ಕಂತು ಮೂಲಕ ಸಾಲಮಾಡಿ ವಾಹನ ಖರೀದಿ ಮಾಡಿರುವುದಾಗಿ ತನಿಖೆವೇಳೆ ಪೊಲೀಸರಿಗೆ ಬಾಯಿ ಬಿಟ್ಟಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಹೆಚ್ಚುವರಿ ಎಸ್.ಪಿ ಎಸ್ ಬದರಿನಾಥ, ಡಿ.ವಾಯ್.ಎಸ್.ಪಿ ರವಿ ನಾಯ್ಕ, ಸಿಪಿಐ ಸಿದ್ದಪ್ಪ ಸಿಮಾನಿ ಅವರ ನೇತೃತ್ವದಲ್ಲಿ ವಿಶೇಷ  ತಂಡ ರಚಿಸಿ ತನಿಖೆ ಕೈ ಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಸಿಪಿಐ ಸಿದ್ದಪ್ಪ ಸಿಮಾನಿ, ಪಿ‌ಎಸ್.ಐ ಬಸವರಾಜ್ ಮಬನೂರ, ಎನ್.ಡಿ.ಜಕ್ಲಣ್ಣನವರ ಹಾಗೂ ಮಣಿಮಾಲನ್ ಮೆಸ್ತಾ, ಸಲೀಮ, ಕೋಟೇಶ  ನಾಗರೊಳ್ಳಿ, ಅಣ್ಣಪ್ಪ ಬುಡಿಗೇರ, ಬಸವರಾಜ್ ಲಮಾಣಿ, ವಿವೇಕ್ ಪಟಗಾರ, ಸಹದೇವ, ಶರತ್ ದೇವಳ್ಳಿ ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸುಮನ್ ಪನ್ನೆಕರ್ ಪೊಲೀಸರ ಕಾರ್ಯವನ್ನು ಪ್ರಶಂಸಿಸಿದ್ದಾರೆ.