Ticker

6/recent/ticker-posts

ಅಂಗಡಿ ಕಳ್ಳತನ ಮಾಡಿದ್ದವರನ್ನು ಬಂಧಿಸಿದ ಮುಂಡಗೋಡ ಪೊಲೀಸರು..!!


ಮುಂಡಗೋಡ:ಅಂಗಡಿಯಲ್ಲಿದ್ದ ಪ್ರಿಜ್ಡ್ ಹಾಗೂ ರೇಷನ್ ಸಾಮಗ್ರಿಗಳನ್ನು ಕದ್ದಿದ್ದ ಶಿರಸಿ ತಾಲೂಕಿನ ಮೂರು ಜನ ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ಮೇ.20ರಂದು ತಾಲೂಕಿನ ಮಳಗಿ ಸನಿಹದ ಪಂಚವಟಿಯಲ್ಲಿರುವ ಹಜರತ ಅಲಿ ಯಲಿವಾಳ ಎಂಬುವರ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ, ಪಿಎಸ್ಐ ಎನ್.ಡಿ.ಜಕ್ಕಣ್ಣನವರ ನೇತೃತ್ವದ ಪೊಲೀಸ್ ತಂಡವು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವುಗಳನ್ನು ಕದ್ದಿದ್ದರು:

ಅಂಗಡಿ ಮೇಲಿನ ತಗಡನ್ನು ತೆಗೆದು ಒಳಗೆ ಇಳಿದು  ಅಂಗಡಿಯಲ್ಲಿದ್ದ ರೇಷನ ಸಾಮಗ್ರಿಗಳು ಮತ್ತು ಪ್ರಿಡ್ ಸೇರಿ, ಅಂದಾಜು 63465 ರೂಪಾಯಿ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ಈ ಪ್ರಕರಣವನ್ನು ಬೇಧಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ ಸುಮನ್ ಪನ್ನೇಕರ ಅವರು ಹೆಚ್ಚುವರಿ ಪೊಲೀಸ್ ಎಸ್‌.ಪಿ ಎಸ್.ಬದರಿನಾಥ, ಶಿರಸಿ ಡಿ.ಎಸ್.ಪಿ ರವಿ.ಡಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಎಸ್.ಸಿಮಾನಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.


ಬಂಧಿತ ಕಳ್ಳರು ಶಿರಸಿಯವರು;

ಅಂಗಡಿ ದರೋಡೆ ಮಾಡಿದ ಆರೋಪಿತರಾದ ಶಿರಸಿಯ ಶುಭಾನಿ ಹೋಟೆಲ್ ಹತ್ತಿರದ ನಿವಾಸಿ  ಸಲೀಮ್  ಅನ್ನರ ಸಾಬ  (25),  ಅಬ್ದುಲ್ ಸತ್ತಾರ ಅಬ್ದುಲ್ ಗಫಾರ ಮುಲ್ಲಾ(28), ಶಿರಸಿ ಇಂದಿರಾನಗರ ನಿವಾಸಿ ಇರ್ಫಾನ್ ತಂದೆ ಮಕಬೂಲ್‌ ಶೇಖ (21) ಇವರನ್ನು ಬಂಧಿಸಲಾಗಿದೆ.

ಕಳ್ಳರನ್ನು ಬಂಧಿಸುವ ತಂಡದಲ್ಲಿ ಎಎಸ್ಐ ಮಣಿಮಲನ್ ಮೇಸ್ತ್ರಿ,  ಸಿಬ್ಬಂದಿಗಳಾದ ರಾಜೇಶ ನಾಯ್ಕ, ಮಾರುತಿ ಮಾಳಗಿ, ಗಣಪತಿ ಹುನ್ನಳ್ಳಿ,  ವಿನೋದಕುಮಾರ, ಅಣ್ಣಪ್ಪ ಬಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಮಾಣಿ, ಪ್ರಕಾಶ ಶಂಗೇರಿ ಹಾಗೂ ಕಾರವಾರದ  ಟೆಕ್ನಿಕಲ್ ಸೆಲ್ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಕಳ್ಳರನ್ನು ಬಂಧಿಸಿರುವ ಪೊಲೀಸ್ ತಂಡವನ್ನು ಎಸ್.ಪಿ ಡಾ.ಸುಮನ್ ಪನ್ನೇಕರ್ ಅಭಿನಂದಿಸಿದ್ದಾರೆ.