ಮಲ್ಲಪ್ಪ ಸೋಮಪ್ಪನವರ (45) ಎಂಬುವನೆ ಸಾವನ್ನಪ್ಪಿದ ಚಾಲಕನಾಗಿದ್ದಾನೆ. ಯಲ್ಲಾಪುರದಿಂದ ಮುಂಡಗೋಡ ಕಡೆ ಬರುತ್ತಿದ್ದ ಬಸ್ ತಾಲೂಕಿನ ಮೈನಳ್ಳಿ ಸನಿಹ ಬರುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್‌ನ ವೇಗ ಕಡಿಮೆ ಮಾಡಿ ಬಸ್ ನಿಲ್ಲಿಸುವಷ್ಟರಲ್ಲಿಯೇ ಚಾಲಕನಿಗೆ ಹೃದಯಾಘಾತವಾಗಿ ದುರಂತ ಸಾವು ಕಂಡಿದ್ದಾನೆ.
ಬಸ್‌ನ್ನು ನಿಲ್ಲಿಸಿ ಪ್ರಾಣ ಬಿಟ್ಟ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ನಿತ್ಯ ನೂರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುತ್ತಿದ್ದ ಚಾಲಕನೇ ಆಘಾತಕಾರಿ ಸಾವು ಕಂಡಿರುವುದು ಪ್ರಯಾಣಿಕರಲ್ಲಿ ದಿಗ್ಭ್ರಮೆ ಮೂಡಿಸಿತು.


ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು