Ticker

6/recent/ticker-posts

ನ್ಯಾಸರ್ಗಿ-ಕುಂದರ್ಗಿ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಶವ ಪತ್ತೆ..!!

 


ಮುಂಡಗೋಡ:ನ್ಯಾಸರ್ಗಿ-ಕುಂದರಗಿ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ರವಿವಾರ ಪತ್ತೆಯಾಗಿದೆ.  ನೆಲದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಶವ ಕಂಡುಬಂದಿದ್ದು, ಟೀಶರ್ಟ್‌ ಹಾಗೂ ಬರ್ಮುಡಾ ಧರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. 

ಮುಂಡಗೋಡ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಕಳೆದ 15-20 ದಿನಗಳ ಹಿಂದೆ ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಪ್ರಕರಣಗಳನ್ನು ಹೋಲಿಕೆ ಮಾಡುತ್ತ, ಅಪರಿಚಿತ ವ್ಯಕ್ತಿಯ ಶವ ಯಾರದ್ದೆಂದು ಕಂಡುಹಿಡಿಯುತ್ತಿದ್ದಾರೆ. 


ಶಿಕ್ಷಕ ನಾಪತ್ತೆಯಾಗಿದ್ದ..!

ಪಟ್ಟಣದ ನೆಹರುನಗರ ನಿವಾಸಿ ಹಾಗೂ ರೋಟರಿ ಶಾಲೆಯ ಶಿಕ್ಷಕ ಆನಂದ ಕಡಗಿ(42) ಕಳೆದ 20 ದಿನಗಳ ಹಿಂದೆ ಮನೆಯಿಂದ ಹೋದವರು ನಾಪತ್ತೆಯಾದ ಬಗ್ಗೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾಗಿದ್ದ ಆನಂದನನ್ನು ಕೊನೆಯ ಬಾರಿ ಸನವಳ್ಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕೆಲವರು ನೋಡಿದ್ದರು ಎನ್ನಲಾಗಿತ್ತು.