ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿಗಳು ಅಯ್ಯಪ್ಪಸ್ವಾಮಿ ದೇವಸ್ಥಾನ ಹತ್ತಿರ ದಾಳಿ ನಡೆಸಿ 230 ಕೆಜಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾನಗಲ್ ತಾಲೂಕಿನ ಇರ್ಷಾದ ಹಾಗೂ ಮುಂಡಗೋಡ ನೂರಾನಿಗಲ್ಲಿಯ ಮೌಲಾಲಿ ಜಂಡೆವಾಲೆ ಬಂಧಿತ ಆರೋಪಿಗಳಾಗಿದ್ದಾರೆ. ಬಂಕಾಪುರದಿಂದ ಟಿಬೇಟಿಯನ್ ಕ್ಯಾಂಪ್‌ಗೆ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪೊಲೀಸ್ ಸಿಬ್ಬಂದಿಗಳಾದ ಸೋಮಶೇಖರ ಮೇತ್ರಿ, ತಿರುಪತಿ ಚೌಡಣ್ಣನವರ, ಸಂಜು ರಾಠೋಡ, ನಾಗಪ್ಪ ಮುರಟಗಿ, ಪ್ರಕಾಶ ಶೃಂಗೇರಿ, ಚಾಲಕ ನಾಗರಾಜ ಬೇಗಾರ ದಾಳಿ ನಡೆಸಿದ್ದ ತಂಡದಲ್ಲಿದ್ದರು.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು