Ticker

6/recent/ticker-posts

ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು..!!!

 


ಮುಂಡಗೋಡ:ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಾದಚಾರಿಯು ಮೃತಪಟ್ಟ ಘಟನೆ ತಾಲೂಕಿನ ಪಾಳಾ ಕ್ರಾಸ್ ಸಮೀಪ ನಡೆದಿದೆ.

ಕೋಡಂಬಿ ಗ್ರಾಮದ ವೆಂಕಟೇಶ್ ಭೋವಿವಡ್ಡರ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಕಾರು ಚಾಲಕ ಶಿರಸಿ ಮಾಗ೯ದಿಂದ ಹುಬ್ಬಳ್ಳಿಯ ಕಡೆ ಅತಿ ವೇಗದಿಂದ ಹೋಗುತ್ತಿದ್ದಾಗ ಪಾಳಾ ದಾಬಾ ಹತ್ತಿರ ಪಾದಚಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ  ಪಾದಚಾರಿ ಹಾರಿ ಬಿದ್ದು ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು  ಪಾಳಾ ಸರ್ಕಾರಿ  ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಕುರಿತು ಕಾರಿನ ಚಾಲಕ ರಾಜಶೇಖರ ಕಂಬಾರ ವಿರುದ್ದ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.