Ticker

6/recent/ticker-posts

ಸರ್ಕಾರಿ ಬಸ್ ಹಾಗೂ ಚಕ್ಕಡಿ ನಡುವೆ ಅಪಘಾತ..!!

 


ಮುಂಡಗೋಡ;ತಾಲೂಕಿನ ಕಾತೂರ ಸಮೀಪದ ಮುಡಸಾಲಿ ಕ್ರಾಸ್ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಟ್ಟಿಗೆ ತುಂಬಿದ ತಳ್ಳುವ ಗಾಡಿಯ ನಡುವೆ ರವಿವಾರ ರಾತ್ರಿ ಡಿಕ್ಕಿ ಸಂಭವಿಸಿದೆ.

ಅದೃಷ್ಟವಶಾತ್ ಕಟ್ಟಿಗೆ ಹೇರಿಕೊಂಡು ಹೋಗುತ್ತಿದ್ದ ಕಾತೂರ ಗ್ರಾಮದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಬಚಾವಾಗಿದ್ದಾರೆ. ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. 


ಮಂಗಳೂರು ಕಡೆ ಹೊರಟಿದ್ದ ಸರ್ಕಾರಿ ಬಸ್ ಹಾಗೂ ಚಕ್ಕಡಿ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು 108ಅಂಬುಲೆನ್ಸ್  ಸಿಬ್ಬಂದಿಗಳಾದ ಧನರಾಜ್ ಬಳೂರು ಮತ್ತು ಕೇಂಚೇಶ್ ಈ ಎನ್ ತಾಲೂಕಾ ಆಸ್ಪತ್ರೆಗೆ ದಾಖಲಿಸದ್ದಾರೆ. 


ಕೊರೆದ ಸಾಗವಾನಿ ತುಂಡುಗಳು ಚಕ್ಕಡಿಯಲ್ಲಿ ಕಂಡುಬಂದಿದ್ದು, ಅಕ್ರಮ ಕಟ್ಟಿಗೆ ಸಾಗಿಸುವಾಗ ಅಪಘಾತ ಸಂಭವಿಸಿತೆ? ಎಂಬ ಸಂಶಯ ಕಾಡತೊಡಗಿದೆ. ಅರಣ್ಯ ಇಲಾಖೆಯವರ ತನಿಖೆಯಿಂದ ಸತ್ಯ ತಿಳಿಯಬೇಕಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.