Ticker

6/recent/ticker-posts

ಮುಂಡಗೋಡದಲ್ಲಿ ಬೈಕ್ ಅಪಘಾತ..!ಇಬ್ಬರು ಸವಾರರಿಗೆ ಗಾಯ..!!


ಮುಂಡಗೋಡ:ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಎದುರಿಗೆ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ರವಿವಾರ ರಾತ್ರಿ ಜರುಗಿದೆ. 

ಬೈಕ್ ಗಳ ಅಪಘಾತದ ಶಬ್ಧದಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾವಣೆಗೊಂಡರು. 


ಬೈಕ್ ಅಪಘಾತದಲ್ಲಿ ಸನವಳ್ಳಿ ಗ್ರಾಮದ ದರ್ಶನ ಕೆರಿಹೊಲದವರ ಹಾಗೂ ಪ್ರಮೋದ ಕೆರಿಹೊಲದವರ ಎಂಬುವರಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ದರ್ಶನ ಎಂಬುವರ ಕಾಲಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.   ಮತ್ತೊಂದು ಬೈಕ್ ಸವಾರ ಅಪಘಾತ ನಡೆದ ಕೂಡಲೇ ಗಾಬರಿಯಿಂದ ಓಡಿಹೋಗಿದ್ದಾನೆ.