Ticker

6/recent/ticker-posts

ಟಿಪ್ಪರ್ ಟೈಯರ್ ಅಡಿ ಸಿಲುಕಿ ಬೈಕ್ ಸವಾರ ಸಾವು..!!


ಮುಂಡಗೋಡ:ಟಿಪ್ಪರ್ ಓವರಟೇಕ್ ಮಾಡಲು ಹೋದ ಬೈಕ್ ಸವಾರನೊಬ್ಬ ಟಿಪ್ಪರ್ ಟಯರ್ ಅಡಿ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪುದ ಘಟನೆ ತಾಲೂಕಿನ ಕೊಪ್ಪ ಗ್ರಾಮದ ಸಮೀಪದ ಹಿರೇಕೇರಿಯಲ್ಲಿ ಮಂಗಳವಾರ ಜರುಗಿದೆ.

ಮೃತಪಟ್ಟ ಬೈಕ್ ಸವಾರ ನಂದಿಗಟ್ಟಾ ಗ್ರಾಮದವನು ಎಂದು ತಿಳಿದುಬಂದಿದೆ. ಟಯರ್ ಮೈಮೇಲೆ ಹರದಿದ್ದರಿಂದ ಸವಾರನ ಕೈಗಳು ಚಪ್ಪಟಿಯಾಗಿವೆ. ಹಿಂಬದಿ ಸವಾರನಿಗೂ ಗಾಯವಾಗಿದ್ದು, ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೈಕ್ ಸವಾರರಿಬ್ಬರೂ ನಂದಿಗಟ್ಟಾ ಗ್ರಾಮದವರೆಂದು ತಿಳಿದುಬಂದಿದ್ದು, ಇಬ್ಬರೂ ಮುಂಡಗೋಡ ಕಡೆಬರುತ್ತಿದ್ದರು. ಟಿಪ್ಪರ್ ಸಹ ಮುಂಡಗೋಡ ಕಡೆ ಬರುತ್ತಿತ್ತು. ಕೊಪ್ಪ ಇಂದಿರಾನಗರ ನಡುವೆ ಈ ಅಪಘಾತ ಸಂಭವಿಸಿದೆ