ಮುಂಡಗೋಡ ಸರ್ಕಾರಿ ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸಗೆ ಮಗುವಿಗೆ NICU ಅವಶ್ಯಕತೆ ಇದೆ ಎಂದೂ ರೆಫರ್ ಮಾಡಲಾಗಿತ್ತು. ಹೋಗುವಾಗ ಹುಬ್ಬಳ್ಳಿ ಹೈವೆ ದಂಡಿ ದುರ್ಗಾದೇವಿ ದೇವಸ್ಥಾನದ ಹತ್ತಿರ ಮಾರ್ಗಮದ್ಯೆ ನೋವು ಹೆಚ್ಚಾದಾಗ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತ ವಾಗಿ ಹೆರಿಗೆ ಮಾಡಿಸಲಾಯಿತು
ಕರವಳ್ಳಿಯ ಜ್ಯೋತಿ ಅಜಿತಕುಮಾರ್ ಕಾಂಬಳೆ(24) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಎರಡನೇ ಹೆರಿಗೆಯಾಗಿದ್ದು, ತಾಯಿ ಮಗು ಇಬ್ಬರೂ ಆರೋಗ್ಯ ವಾಗಿದ್ದಾರೆ. ನಂತರ ಕಿಮ್ಸ್ ಗೆ ದಾಖಲಿಸಲಾಯಿತು ಎಂದು 108ರ ಆರೋಗ್ಯ ಸಿಬ್ಬಂದಿ ಧನರಾಜ ಬಳೂರ ತಿಳಿಸಿದ್ದಾರೆ.
ಚಾಲಕ ಕೆಂಚೇಶ್ ಇ. ಎನ್. ಇದ್ದರು.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು