Ticker

6/recent/ticker-posts

108ಅಂಬುಲೆನ್ಸ್ ನಲ್ಲಿ ಹೆಣ್ಣು ಮಗು ಜನನ..!!!


ಮುಂಡಗೋಡ:ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯು ಅಂಬ್ಯುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ಜರುಗಿದೆ. 

ತಾಲೂಕಿನ ಬಡ್ಡಿಗೇರಿ ಗ್ರಾಮದ ಬಾಗುಬಾಯಿ ಜಾನು ಕೋಕರೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಾಗುಬಾಯಿ ಅವರಿಗೆ ಇದು ಎರಡನೇ ಹೆರಿಗೆಯಾಗಿದೆ. ಮಹಿಳೆಗೆ ತೀವ್ರ ನೋವು ಇದ್ದ ಕಾರಣ ಬಡ್ಡಿಗೇರಿ ಕ್ರಾಸ್ ಬಳಿ108 ಅಂಬ್ಯುಲೆನ್ಸ್ ನಲ್ಲಿಯೇ ಸುರಕ್ಷಿತವಾಗಿ ಹೆರಿಗೆಯನ್ನು ಮಾಡಿಸಲಾಯಿತು ಎಂದು  ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ  ಬಳೂರು ತಿಳಿಸಿದ್ದಾರೆ. 

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂಡಗೋಡದ  ತಾಲೂಕು ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ಚಾಲಕ ಕೆಂಚೇಶ್.ಇ.ಎನ್ ಇದ್ದರು.