Ticker

6/recent/ticker-posts

ಕುಡಿದ ನಶೆಯಲ್ಲಿ ಬಿದ್ದು ಸತ್ತ ದುರ್ದೈವಿ..!ಸಾವು ಹೀಗೂ ಆಗಬಹುದು..!!!


ಮುಂಡಗೋಡ: ವ್ಯಕ್ತಿಯೊಬ್ಬನು ಸಾರಾಯಿ ಕುಡಿದ ನಶೆಯಲ್ಲಿ ಆಕಸ್ಮಿಕವಾಗಿ ಜೋಲಿ ತಪ್ಪಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ.

ನಂದಿಕಟ್ಟಾ ಗ್ರಾಮದ ಬಾಬು ರಾಜಪ್ಪಾ ನವಲೇನವರ (52) ಎಂಬುವರು ಮೃತಪಟ್ಟ ದುರ್ದೈವಿ. 

ಈತನು ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದನಂತೆ. ಶನಿವಾರ ಸಾಯಂಕಾಲ  4ಗಂಟೆಯ ಸುಮಾರಿಗೆ ತನ್ನ ತೋಟದ  ಬೋರವೆಲ್ ಮನೆಗೆ ತೆರಳಿದಾಗ ಸಾರಾಯಿ ಕುಡಿದ ನಶೆಯಲ್ಲಿಯೆ ಜೋಲಿ ತಪ್ಪಿ ಬೋರವೇಲ್ ಮನೆಯ ಹತ್ತಿರ ಬಿದ್ದು,  ಮುಖದ ಭಾಗಕ್ಕೆ ಹಾಗೂ ಕಾಲಿಗೆ ಗಾಯ ನೋವುಗಳಾಗಿ ಮೃತಪಟ್ಟಿದ್ದಾನೆ. ರವಿವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಹೀಗಂತ ಈತನ  ಮಗ ವಿಠ್ಠಲ ನವಲೇನವರ ಮುಂಡಗೋಡ  ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.