ಪಟ್ಟಣದ ಅಮ್ಮಾಜಿ ಕೆರೆಯಲ್ಲಿ ಕಾರೊಂದು ಮುಳುಗಿ, ಕಾರಿನಲ್ಲಿದ್ದ ಇಬ್ಬರೂ ಮೃತಪಟ್ಟ ಘಟನೆ ಸೋಮವಾರ ನಸುಕಿನಲ್ಲಿ ಜರುಗಿದೆ.
ರಾಜು ವರ್ಗೀಸ್ ಹಾಗೂ ಬ್ಲೆಸ್ಸಿ ಮೃತರಾಗಿದ್ದಾರೆ.
ಮೂಲತಃ ಅರಿಶಿಣಗೇರಿಯವರಾದ ಇಬ್ಬರೂ, ಬೆಂಗಳೂರಿನಲ್ಲಿ ನೆಲೆಸಿದ್ದರು. ಕರವಳ್ಳಿಯಲ್ಲಿ ಸಂಬಂಧಿಕರೊಬ್ಬರು ತೀರಿಕೊಂಡಿದ್ದರಿಂದ ಅವರ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬರುತ್ತಿರುವಾಗ, ಅಮ್ಮಾಜಿ ಕೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ನೀರಿನಲ್ಲಿ ಮುಳುಗಿದೆ. ಇಬ್ಬರೂ ಸಾವನ್ನಪ್ಪಿದ್ದಾರೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು