Ticker

6/recent/ticker-posts

108 ಅಂಬುಲೆನ್ಸನಲ್ಲಿಯೇ ಸುರಕ್ಷಿತ ಹೆರಿಗೆ..!!


ಮುಂಂಡಗೋಡ:ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ 108ಆರೋಗ್ಯ ಸಿಬ್ಬಂದಿ ಸುರಕ್ಷಿತ ಹೆರಿಗೆ ಮಾಡಿಸಿದ ಘಟನೆ ತಾಲೂಕಿನ ಇಂದಿರಾನಗರ ಕೊಪ್ಪ ಗ್ರಾಮದಲ್ಲಿ ಗುರುವಾರ ಜರುಗಿದೆ. 

ಅನಿತಾ ಯಲ್ಲೋಜಿ ಅಡಿಗೇರ್ ಎಂಬ ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಮೂರನೇ ಹೆರಿಗೆಯಾಗಿದೆ. 

ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಬಳೂರು ಇದ್ದರು. ಪ್ರಕಾಶ್ ಬಾಗೇವಾಡಿ ಅಂಬುಲೆನ್ಸ್ ಚಾಲನೆ ಮಾಡುತ್ತಿದ್ದರು. 

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂಡಗೋಡದ ತಾಲೂಕು ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ ಎಂದು ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.