ಪಟ್ಟಣದ ಬಂಕಾಪುರ ರಸ್ತೆಯಲ್ಲಿರುವ ಸಾಯಿನಾಥ ಕ್ಲಿನಿಕ್ ಹಾಗೂ ನಂದೀಶ್ವರ ನಗರದಲ್ಲಿರುವ ರಾಜೇಂದ್ರಯ್ಯ ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಅನಧಿಕೃತವಾಗಿ ಇಂಗ್ಲೀಷ್ ಔಷಧಿಗಳನ್ನು ಬಳಸಿ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಅಧಿಕಾರಿಗಳ ತಂಡವು ಪತ್ತೆ ಹಚ್ಚಿದೆ.
ಅರ್ಧಾಂಗ ವಾಯು(ಪ್ಯಾರಾಲಿಸಿಸ್) ಗೆ ಔಷಧಿ ಕೊಡುವುದಾಗಿ ಜನರನ್ನು ನಂಬಿಸಿ, ಅರ್ಹತೆ ಇರದಿದ್ದರೂ ಇಂಗ್ಲೀಷ ಔಷಧಿ ನೀಡುತ್ತಿರುವುದರ ಬಗ್ಗೆ ವೈದ್ಯರ ತಂಡವು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮೂರು ಬಾರಿ ಎಚ್ಚರಿಕೆ ನೀಡಿದ್ದರೂ, ಕ್ಯಾರೆ ಎನ್ನದ ಮಹಿಳಾ ವೈದ್ಯೆ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಿದ್ದರು. ಇದರಿಂದ ಆಕ್ರೋಶಗೊಂಡ ತಂಡವು, ದಾಳಿ ನಡೆಸಿ, ಕ್ಲಿನಿಕ್ ನಲ್ಲಿದ್ದ ಎಲ್ಲ ಔಷಧಿಗಳನ್ನು ಸೀಜ್ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.
ಇನ್ನೂ, ಪಟ್ಟಣದ ನಂದೀಶ್ವರ ನಗರದಲ್ಲಿರುವ ರಾಜೇಂದ್ರಯ್ಯ ಕ್ಲಿನಿಕ್ ಸಹ ಅನಧಿಕೃತವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಇಲ್ಲಿಯೂ, ಪರವಾನಿಗೆ ಪಡೆಯದೇ, ರೋಗಿಗಳಿಗೆ ಇಂಗ್ಲೀಷ್ ಔಷಧಿಗಳನ್ನು ಬಳಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕ್ಲಿನಿಕ್ ನಲ್ಲಿದ್ದ ಇಬ್ಬರು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ ವೈದ್ಯರು, ಕ್ಕಿನಿಕ್ ನಲ್ಲಿದ್ದ ಔಷಧಿಗಳನ್ನು ಸೀಜ್ ಮಾಡಲು ಸೂಚಿಸಿದರು.
ತಹಶೀಲ್ದಾರ್ ಶ್ರೀಧರ ಮುಂದಲಮನಿ, ತಾಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ್, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ, ಆಯುಷ್ ವೈದ್ಯಾಧಿಕಾರಿ ಡಾ.ಸಂಜೀವ ಗಲಗಲಿ, ಆಯಎಂಎ ಮುಂಡಗೋಡದ ಅಧ್ಯಕ್ಷ ಡಾ.ರವಿ ಹೆಗಡೆ, ಪಿ.ಎಸ್.ಐ ಎನ್.ಡಿ.ಜಕ್ಕಣ್ಣವರ್ ಈ ಸಂದರ್ಭದಲ್ಲಿ ಇದ್ದರು
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು