ಮುಂಡಗೋಡ:ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಗರ್ಭಿಣಿ ಮಹಿಳೆಯ ಮನೆಯಲ್ಲಿ ಸುರಕ್ಷಿತವಾಗಿ ಹೆರಿಗೆಯನ್ನು ಮಾಡಿಸಿದ ಘಟನೆ ಶನಿವಾರ ಜರುಗಿದೆ.
ತಾಲೂಕಿನ ಅಗಡಿ ಗ್ರಾಮದ ಗೀತಾ ಪ್ರಭು ನಾಯಕ(25) ಎಂಬ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಎರಡನೇ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.
ಅತಿಯಾದ ಮಳೆ ಇದ್ದ ಕಾರಣ ಮತ್ತು ಹೆಚ್ಚಿನ ನೋವಿನಿಂದ ಬಳಲುತ್ತಿದ್ದರಿಂದ ಮಹಿಳೆಗೆ ಮನೆಯಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಯಿತು. ಹೆರಿಗೆ ನಂತರ ಮಹಿಳೆಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು