Ticker

6/recent/ticker-posts

ಬುದ್ದಿಮಾತಿಗೆ ನೊಂದು ನೇಣಿಗೆ ಶರಣಾದ..!!


ಮುಂಡಗೋಡ: ಸಾರಾಯಿ ಕುಡಿಯದಂತೆ ಬುದ್ದಿಮಾತು ಹೇಳಿದ್ದಕ್ಕೆ,  ಮನಸ್ಸಿಗೆ ಹಚ್ಚಿಕೊಂಡು  ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮರಗಡಿ ಗ್ರಾಮದ  ಗೌಳಿದಡ್ಡಿಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಜರುಗಿದೆ.

ನಿನ್ನು ಪೊಂಡೆ(40) ಎಂಬ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಈತನು ಸರಾಯಿ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳೊಂದಿಗೆ ಪ್ರತಿ ದಿನ ಜಗಳ ಮಾಡುತ್ತಿದ್ದನಂತೆ.  ಸಾರಾಯಿ ಕುಡಿಯದಂತೆ ಬುದ್ದಿ ಮಾತು ಹೇಳುತ್ತಿದ್ದರಿಂದ ಬೇಸರ ಮಾಡಿಕೊಂಡು ಮಂಗಳವಾರ ಬೆಳಗ್ಗೆ ಮನೆಯ ಎದುರು ಇರುವ ಕಾಡಿನಲ್ಲಿ, ಮರಕ್ಕೆ ನೈಲಾನ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಹೆಂಡತಿ ಬೊಮ್ಮುಬಾಯಿ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.