ಮುಂಡಗೋಡ : ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ " ಮಹರ್ಷಿ ವಾಲ್ಮೀಕಿ ಜಯಂತಿ " ಕಾರ್ಯಕ್ರಮವನ್ನು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಆದಿಕವಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ನಂತರ ನ್ಯಾಸರ್ಗಿ ರಸ್ತೆಯಲ್ಲಿರುವ ಮಹರ್ಷಿ ವಾಲ್ಮೀಕಿ ಗದ್ದುಗೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಪೂಜೆ ಸಲ್ಲಿಸಿ ನಮಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಆರ್.ಎಂ.ಮಳಗೀಕರ್,ಪ.ಪಂ.ಸದಸ್ಯೆ ಶಕುಂತಲಾ ತಳವಾರ, ಬಿಜೆಪಿ ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ತಳವಾರ, ವಾಲ್ಮೀಕಿದ ಸಮಾಜದ ಮುಖಂಡರಾದ ಚಂದ್ರಣ್ಣ ವಾಲ್ಮೀಕಿ, ನಾಗರಾಜ ವಾಲ್ಮೀಕಿ, ಭೀಮಣ್ಣ ತಳವಾರ, ದಲಿತ ಮುಖಂಡರಾದ ಚಿದಾನಂದ ಹರಿಜನ, ಹನಮಂತ ಆರೇಗೊಪ್ಪ, ಹನಮಂತ ಭಜಂತ್ರಿ, ಅಶೋಕ ಚಲವಾದಿ, ಉಪ ತಹಶೀಲ್ದಾರ್ ಜಿ.ಬಿ.ಭಟ್, ಸಮಾಜ ಕಲ್ಯಾಣ ಅಧಿಕಾರಿ ಗೋಪಾಲಕೃಷ್ಣ, ಸಿಪಿಐ ಸಿದ್ಧಪ್ಪ ಸಿಮಾನಿ, ಮುಖ್ಯಾಧಿಕಾರಿ ಸಂಗನಬಸಯ್ಯ, ಕೃಷಿ ಅಧಿಕಾರಿ ಎಂ.ಎಸ್.ಕುಲಕರ್ಣಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು