Ticker

6/recent/ticker-posts

ಬಸ್ ಅಪಘಾತ:ಬೈಕ್ ಸವಾರ ಸಾವು..!!!

 


ಮುಂಡಗೋಡ: ನಿಂತ ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಗೋಟಗೋಡಿ ಕೊಪ್ಪ ಕ್ರಾಸ್ ಸನಿಹ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಜರುಗಿದೆ.

ಮಳಗಿ ಪಂಚಾಯತ ವ್ಯಾಪ್ತಿಯ ಅಬ್ದುಲ್‌ಕರೀಂ ಶಿರಗೋಡ (60)  ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈತ ಹರಗನಹಳ್ಳಿಯಿಂದ ಭದ್ರಾಪುರ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ,ಗೋಟಗೋಡಿಕೊಪ್ಪ ಕ್ರಾಸ್ ಸಮೀಪದ ರಸ್ತೆಯಂಚಿಗೆ ಬೈಕ್  ನಿಲ್ಲಿಸಿದ್ದ ವೇಳೆ  ನಿಯಂತ್ರಣ ಸಿಗದೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಅಬ್ದುಲ್‌ಕರೀಂ ತೀವ್ರವಾಗಿ ಗಾಯಗೊಂಡಿದ್ದ.  ಈತನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಕಿಮ್ಸಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.