Ticker

6/recent/ticker-posts

ಸಂತೆ ಕರ ವಸೂಲಿಯ ಬಗ್ಗೆ ಆರೋಪ ಮಾಡಿದ್ದ ವ್ಯಾಪಾರಿ ತರಾಟೆಗೆ..!!

ಮುಂಡಗೋಡ:ಸುಗಮವಾಗಿ ನಡೆಯುತ್ತಿದ್ದ ಇಂದೂರ ಸಂತೆಯಲ್ಲಿ, ವ್ಯಾಪಾರಿಯೊಬ್ಬ ಬೇಕಾಬಿಟ್ಟಿ ಕರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರಿಂದ, ಅಸಮಾಧಾನಗೊಂಡ ಗ್ರಾಮ ಪಂಚಾಯತ ಸದಸ್ಯರು, ಆ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡು, ನಡೆದಿರುವ ಘಟನೆಯನ್ನು ವಿವರಿಸುವಂತೆ ಒತ್ತಾಯಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಗುರುವಾರ ನಡೆದ ಇಂದೂರ ಗ್ರಾಮದ ಸಂತೆಯಲ್ಲಿ ವ್ಯಾಪಾರಿಯೊಬ್ಬ ವಾರದ ಕರ ವಸೂಲಿ ನೀಡಲು ತಕರಾರು ತೆಗೆದು, ಅದನ್ನು ವಿಡಿಯೋ ಮಾಡಿ ಹರಿಯಬಿಟ್ಟಿದ್ದ. ಇದರಿಂದ ಅಸಮಾಧಾನಗೊಂಡ ಹಲವು ವ್ಯಾಪಾರಸ್ಥರು, ಇಂದೂರ ಸಂತೆಯಲ್ಲಿ 12ವರ್ಷಗಳಿಂದ ಸಂತೆಗೆ ಬರುತ್ತಿದ್ದೇವೆ. ನಮಗೆ ಗ್ರಾ.ಪಂ.ದಿಂದ ಉತ್ತಮ ಸ್ಪಂದನೆ ಸಿಗುತ್ತದೆ. ಬೇಕಾಬಿಟ್ಟಿ ಕರ ವಸೂಲಿ ಮಾಡುತ್ತಿಲ್ಲ. ನಿನ್ನೆ ಮೊನ್ನೆ ಬಂದವನೊಬ್ಬ ಹೇಳಿಕೆ ನೀಡಿದರೆ, ಅದನ್ನು ನಾವು ಬೆಂಬಲಿಸುವುದಿಲ್ಲ ಎಂದು ವ್ಯಾಪಾರಸ್ಥರೇ ಹೇಳಿ, ಗ್ರಾ.ಪಂ.ದ ಬೆಂಬಲಕ್ಕೆ ನಿಂತರು.



ವ್ಯಾಪಾರಿಗಳಿಂದ 10-20ರೂಪಾಯಿ ವಸೂಲಿ ಮಾಡುತ್ತಿರುವುದು ಸ್ವಂತಕ್ಕೆ ಅಲ್ಲ. ಬದಲಾಗಿ, ಸಂತೆಯ ನಂತರ ಸ್ವಚ್ಛತೆ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಖುಷಿಯಿಂದ ವ್ಯಾಪಾರಿಗಳೇ ನೀಡುತ್ತಿದ್ದೇವೆ. ಇಲ್ಲಿ ಹಣ ದುರ್ಬಳಕೆಯ ಪ್ರಶ್ನೆ ಬರುವುದಿಲ್ಲ ಎಂದು ವ್ಯಾಪಾರಿಗಳು ಹೇಳಿದರು. 
ನಂತರ ಆರೋಪ ಮಾಡಿದ್ದ ನಂದಿಗಟ್ಟಾದ ವ್ಯಾಪಾರಿಯನ್ನು ಗ್ರಾಮಸ್ಥರು ಪ್ರಶ್ನಿಸಿದರು. ಆಗ ವ್ಯಾಪಾರಿಯು 2-3ವಾರಗಳಿಂದ ಸಂತೆಯ ಕರ ನೀಡಿದ್ದಿಲ್ಲ. ಅದರ ಬಗ್ಗೆ ಸ್ವಲ್ಪ ಮಾತಿನ ಚಕಮಕಿ ನಡೆದಿತ್ತು. ಅದು ಬಿಟ್ಟರೇ ಬೇರೆನೂ ನಡೆದಿಲ್ಲ ಎಂದು ಗ್ರಾಮಸ್ಥರು ಹಾಗೂ ವ್ಯಾಪಾರಿಗಳ ಮುಂದೆ ಒಪ್ಪಿಕೊಂಡರು.