Ticker

6/recent/ticker-posts

ಅನಾರೋಗ್ಯದ ಚಿಂತೆ, ನೇಣಿಗೆ ಶರಣಾದ ಯುವಕ..!

ಮುಂಡಗೋಡ:ಅನಾರೋಗ್ಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಜರುಗಿದೆ.
    (ಸಾಂದರ್ಭಿಕ ಚಿತ್ರ)

ಗಿರೀಶ ಕೃಷ್ಣಮೂರ್ತಿ ಅಕ್ಕಸಾಲಿ(38) ಮೃತ ದುರ್ದೈವಿ. ಮೃತ ಗಿರೀಶನಿಗೆ ಆರೋಗ್ಯ ಸರಿಯಿಲ್ಲದ್ದರಿಂದ ಆಸ್ಪತ್ರೆಯಲ್ಲಿ ಎಷ್ಟೇ ಚಿಕಿತ್ಸೆ ಕೊಡಿಸಿದರೂ, ಆರೋಗ್ಯ ಸುಧಾರಣೆ ಆಗಿರಲಿಲ್ಲವಂತೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು, ಓಣಿಕೇರಿ ಗ್ರಾಮದ ಮನೆಯಲ್ಲಿ, ಯಾರೂ ಇಲ್ಲದಾಗ ಮೇಲ್ಚಾವಣಿ ಕಟ್ಟಿಗೆಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. 

ಆತ್ಮಹತ್ಯೆ ಮಾಡಿಕೊಂಡ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.