Ticker

6/recent/ticker-posts

ಉತ್ತರ ಕನ್ನಡ ಜಿಲ್ಲಾ ಎಸ್.ಪಿ. ಆಗಿ ವರ್ತಿಕಾ ಕಟಿಯಾರ್..!

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆಗಿ ವರ್ತಿಕಾ ಕಟಿಯಾರ್ ನೇಮಕಗೊಂಡಿದ್ದಾರೆ. ಹಾಲಿ ಎಸ್.ಪಿ. ಆಗಿ ಕೆಲಸ ಮಾಡುತ್ತಿರುವ ಶಿವಪ್ರಕಾಶ ದೇವರಾಜು ಅವರನ್ನು ವರ್ಗಾಯಿಸಲಾಗಿದೆ.


ಇನ್ನುಳಿದಂತೆ ಜಿ.ಸಂಗೀತಾ ಅವರನ್ನು ಚಾಮರಾಜನಗರ ಎಸ್.ಪಿ ಆಗಿ, ಎಚ್.ಡಿ.ಆನಂದಕುಮಾರ ಅವರನ್ನು ವಿಜಯಪುರ ಎಸ್.ಪಿ. ಆಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.